ವಾಮಂಜೂರು ಕಜೆ ನಿವಾಸಿ ಮೊಹಮ್ಮದ್ ಸಾದಿಕ್ (40) ಕಾರು ಡಿಕ್ಕಿ ಹೊಡೆದು ಮೃತ್ಯು.
ಜೂನ್ 10, 2025
0
ವಾಮಂಜೂರು ಕಜೆ ನಿವಾಸಿ ಮೊಹಮ್ಮದ್ ಸಾದಿಕ್ (40) ಕಾರು ಡಿಕ್ಕಿ ಹೊಡೆದು ಮೃತ್ಯು.
ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರು ಕಜೆ ನಿವಾಸಿ, ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿದ್ದ ಮೊಹಮ್ಮದ್ ಸಾದಿಕ್ (40) ರಾಷ್ಟ್ರೀಯ ಹೆದ್ದಾರಿ ಪೋಸೋಟ್ ನಲ್ಲಿ ರಸ್ತೆ ದಾಟುತ್ತಿರುವ ವೇಳೆ ಕಾರು ಡಿಕ್ಕಿ ಹೊಡೆದು, ಮೃತಪಟ್ಟರು. ನಿನ್ನೆ ರಾತ್ರಿ 10.40 ಕ್ಕೆ ಈ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ಗಂಭೀರ ಗಾಯಗೊಂಡ ಸಾದಿಕ್ ರನ್ನು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಸಾದಿಕ್ ಮೃತಪಟ್ಟಿದ್ದಾರೆ. ಮೃತದೇಹವನ್ನು ಇದೀಗ ಕಾಸರಗೋಡು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದ್ದು, ಶವಮಹಜರು ನಡೆಸಿದ ಬಳಿಕ ಅಪರಾಹ್ನ 2 ಗಂಟೆಗೆ ಮನೆಗೆ ತರಲಾಗುವುದು. ಬಳಿಕ ವಾಮಂಜೂರು ಬಿಲಾಲ್ ಮಸೀದಿ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಮೃತರು ವಾಮಂಜೂರು ಕಜೆ ನಿವಾಸಿ, ದಿ.ಮೂಸರವರ ಪುತ್ರನಾಗಿದ್ದು, ತಾಯಿ: ಮರಿಯಮ್ಮ, ಸಹೋದರ - ಸಹೋದರಿಯರಾದ: ಅಬ್ದುಲ್ಲ, ಅಬ್ದುಲ್ಲ ಖಾದರ್, ಆಯಿಷಾತ್ ತಾಯಿರ, ಅವ್ವುನ್ನಿ, ಖದೀಜ, ಹಾಜಿರಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲುಗೊಂಡಿದೆ.



