Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಹೊಸಬೆಟ್ಟುವಿನಲ್ಲಿ ಖಾಸಗಿ ಬಸ್ - ಕಾರು ಅಪಘಾತ. ವರ್ಕಾಡಿ ನಿವಾಸಿ ಮೂವರಿಗೆ ಗಾಯ.

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಹೊಸಬೆಟ್ಟುವಿನಲ್ಲಿ ಖಾಸಗಿ ಬಸ್ - ಕಾರು ಅಪಘಾತ. ವರ್ಕಾಡಿ ನಿವಾಸಿ ಮೂವರಿಗೆ ಗಾಯ.
ಮಂಜೇಶ್ವರ: ರೈಲು ನಿಲ್ದಾಣದಿಂದ ಬರುತ್ತಿದ್ದ ಕಾರಿಗೆ ಕಾಸರಗೋಡು ಭಾಗದಿಂದ ತಲಪಾಡಿಗೆ ತೆರಳುತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ 8.30 ಕ್ಕೆ ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಹೊಸಬೆಟ್ಟುವಿನಲ್ಲಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ವರ್ಕಾಡಿ ದೇವಸ್ಥಾನ ಬಳಿಯ ನಿವಾಸಿ ಪ್ರೀತಮ್ (20), ತಿಮ್ಮ0ಗೂರು ಅಣೆ ನಿವಾಸಿ ಪ್ರಜ್ವಲ್ (21), ಪಾವಳ ತೋಕೆ ನಿವಾಸಿ ಕೆಲ್ವಿನ್ (20) ಎಂಬವರಿಗೆ ಗಾಯಗಳಾಗಿದ್ದು, ಸ್ಥಳೀಯರು ಕೂಡಲೇ ಗಾಯಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಮೂವರು ಕಾರ್ಯ ನಿಮ್ಮಿತ ಮಂಗಳೂರಿಗೆ ರೈಲಿನಲ್ಲಿ ತೆರಳಳಿದ್ದು, ಅದಕ್ಕಾಗಿ ಕಾರಿನಲ್ಲಿ ಮಂಜೇಶ್ವರ ರೈಲ್ವೆ ಸ್ಟೇಷನ್ ಗೆ ಬಂದಿದ್ದರು. ಆವಾಗಲೇ ರೈಲು ತೆರಳಿದ್ದರಿಂದ ಹಿಂದಿರುಗಿ ತಮ್ಮ ಕಾರಿನಲ್ಲಿ ಊರಿನ ಕಡೆ ಬರುತ್ತಿದ್ದಂತೆ
ಎದುರಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ. ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.