ಉದ್ಯಾವರ ಮಾಡ ತಿಮಿರಿ ಬೆಳ್ಚಾಪ್ಪಾಡರಿಗೆ ಮಾತೃಶ್ರೀ ವಿಯೋಗ.
ಏಪ್ರಿಲ್ 15, 2025
0
ಉದ್ಯಾವರ ಮಾಡ ತಿಮಿರಿ
ಬೆಳ್ಚಾಪ್ಪಾಡರಿಗೆ ಮಾತೃಶ್ರೀ ವಿಯೋಗ.
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ದೈವಗಳ ತಮ್ಮ ದೈವದ ಪಾತ್ರಿ ಶ್ರೀ ತಿಮಿರಿ
ಬೆಳ್ಚಾಪ್ಪಾಡರ ಮಾತೃಶ್ರೀಯವರಾದ ಶ್ರೀಮತಿ ಜಾನಕಿ (83) ರವರು ವಯೋಸಹಜ ಅಸೌಖ್ಯದಿಂದ ಇಂದು ಮುಂಜಾನೆ ಸ್ವಗೃಹದಲ್ಲಿ ಭಗವಂತನ ಪಾದ ಸೇರಿರುತ್ತಾರೆ. ಮೃತರ ಅಂತ್ಯಸಂಸ್ಕಾರದ ವಿಧಿವಿಧಾನಗಳು ಇಂದು ಸಂಜೆ 4:00 ಕ್ಕೆ ಸರಿಯಾಗಿ ಮಾಡ ರುದ್ರಭೂಮಿಯಲ್ಲಿ ನಡೆಯಲಿರುವುದು ಎಂದು ಮನೆ ಮಂದಿ ತಿಳಿಸಿದ್ದಾರೆ. ಮೃತರು: ದಿ. ಕೆ. ಗೋಪಾಲ ರವರ ಪತ್ನಿಯಾಗಿದ್ದು, ಮಕ್ಕಳಾದ: ಸುಜಾತ, ದಿವಾಕರ ಮುಂಬೈ, ಶ್ರೀ ತಿಮಿರಿ
ಬೆಳ್ಚಾಪ್ಪಾಡ, ಅಳಿಯ: ಸುರೇಶ್, ಸೊಸೆ: ಶರ್ಮಿಳಾ ಮುಂಬೈ, ಶಾಂತ, ಸಹೋದರ: ನಾರಾಯಣ ಮಾಡೂರು, ಮೊಮ್ಮಕ್ಕಳಾದ: ಮೋಕ್ಷಿತ್, ಸೋನಾಲಿ, ಶಮಿತ್ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

