"ಮಸ್ಕತ್ ಗಡಿನಾಡ ಉತ್ಸವ" ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ.
ಏಪ್ರಿಲ್ 15, 2025
0
"ಮಸ್ಕತ್ ಗಡಿನಾಡ ಉತ್ಸವ" ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಜೇಶ್ವರ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಒಮಾನ್ ಘಟಕ ಮಸ್ಕತ್ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ಸರಕಾರ ಮತ್ತು ಒಮಾನಿನ ಎಲ್ಲಾ ಕನ್ನಡ ಪರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ದಿನಾಂಕ 18-04-2025 ರಂದು ಮಸ್ಕತ್ ನ ಮಜಾನ್ ಹೈಟ್ಸ್ ಸಭಾಂಗಣದಲ್ಲಿ ನಡೆಯುವ ಮಸ್ಕತ್ ಗಡಿನಾಡ ಉತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಆರ್ಥಿಕ ತಜ್ಞ ಸಿ.ಎ ರಮಾನಂದ ಪ್ರಭು ಬಿಡುಗಡೆ ಗೊಳಿಸಿದರು. ಸಮಾರಂಭದಲ್ಲಿ ಬ್ಯಾಂಕ್ ದೋಫಾರ್ ನ ಹಿರಿಯ ಅಧಿಕಾರಿ ಜಿ ವಿ ರಾಮಕೃಷ್ಣ, ಒಮಾನ್ ಇಂಡಿಯನ್ ಸೋಶಿಯಲ್ ಕ್ಲಬ್ ನ ಆಡಳಿತ ಮಂಡಳಿ ಸದಸ್ಯ ಎಸ್ ಡಿ ಟಿ ಪ್ರಸಾದ್, ಮಸ್ಕತ್ ಕನ್ನಡ ಸಂಘದ ಅಧ್ಯಕ್ಷ ಮಂಜುನಾಥ ಸಂಗಟ್ಟಿ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಅಧ್ಯಕ್ಷ ಅಬೂಬಕರ್ ರೋಯಲ್ ಬೊಳ್ಳಾರ್,ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕದ ಸಲಹಾ ಸಮಿತಿ ಸದಸ್ಯ ಶಿವಾನಂದ ಕೋಟಿಯಾನ್ ಯುವರಾಜ್ ಸಾಲಿಯಾನ್, ಹಿತೇಶ್ ಮಂಗಳೂರು, ರೇಷ್ಮಾ ಹಿತೇಶ್, ನ್ಯೂ ವೈಬ್ರೆಂಟ್
ಪಿ ಯು ಕಾಲೇಜ್ ಮೂಡಬಿಡದಿರೆಯ ನಿರ್ದೇಶಕ ಅಮರೇಶ ವಾ ಟಗಲ್,ಸಮಾಜ ಸೇವಕರಾದ ಪದ್ಮಾಕರ ಮೆಂಡನ್, ರವಿ ಅಚಾರ್ಯ, ಭಾಸ್ಕರ್ ಕೋಟ್ಯನ್ , ಪ್ರಸಾದ್ ಮರಾಠೆ, ಕಾರ್ತಿಕ್ ಕುಂದರ್, ಅನಿಲ್ ಪೂಜಾರಿ, ಅಕ್ಷಯ್ ಮೂಡಬಿದ್ರೆ, ಶ್ವೇತಾ ಕೋಟಿಯಾನ್ ಮುಂತಾದವರು ಉಪಸ್ಥಿತರಿದ್ದರು.

