ಮಧೂರು ಶ್ರೀ ಮದನಂತೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ.
ಏಪ್ರಿಲ್ 02, 2025
0
ಮಧೂರು ಶ್ರೀ ಮದನಂತೇಶ್ವರ ದೇವರಿಗೆ
ಬ್ರಹ್ಮಕಲಶಾಭಿಷೇಕ.
ಕಾಸರಗೋಡು: ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯಂಗವಾಗಿ ಇಂದು (02-04-2025) ಬೆಳಗ್ಗೆ ಶ್ರೀ ಮದನಂತೇಶ್ವರ ದೇವರಿಗೆ
ಬ್ರಹ್ಮಕಲಶಾಭಿಷೇಕ, ಬ್ರಹ್ಮ ಕುಂಭಾಭಿಷೇಕ, ಶ್ರೀ ಮಹಾಗಣಪತಿ ದೇವರಿಗೆ ಬ್ರಹ್ಮಕುಂಭಾಭಿಷೇಕ, ಅವಸ್ತುತ ಬಲಿ, ಮಹಾಮೂಡಪ್ಪ ಸೇವೆಯ ಪ್ರಾರ್ಥನೆ ಧ್ವಜಾರೋಹಣ ನಡೆಯಿತು. ಸಂಜೆ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ, ಮಹಾಪೂಜೆ, ಉತ್ಸವ ಬಲಿ, ಶ್ರೀ ಮಹಾಗಣಪತಿ ಮಂತ್ರಾನುಷ್ಠಾನ ನಡೆಯಲಿದೆ.



