Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಧೂರು ಬ್ರಹ್ಮಕಲಶ ಮೂಡಪ್ಪ ಸೇವೆಯಂಗವಾಗಿ ಮೊಗ್ರಾಲ್‌ ಪುತ್ತೂರು ಪಂಚಾಯತ್‌ ಸಮಿತಿಯಿಂದ ಹೊರೆಕಾಣಿಕೆ ಮೆರವಣಿಗೆ ಸಮರ್ಪಣೆ.

ಮಧೂರು ಬ್ರಹ್ಮಕಲಶ ಮೂಡಪ್ಪ ಸೇವೆ : ಮೊಗ್ರಾಲ್‌ ಪುತ್ತೂರು ಪಂಚಾಯತ್‌ ಸಮಿತಿಯಿಂದ ಹೊರೆಕಾಣಿಕೆ ಮೆರವಣಿಗೆ ಸಮರ್ಪಣೆ
ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮೂಡಪ್ಪ ಸೇವೆಯ ಅಂಗವಾಗಿ ಮೊಗ್ರಾಲ್‌ ಪುತ್ತೂರು ಪ್ರಾದೇಶಿಕ ಸಮಿತಿಯ ವತಿಯಿಂದ ಅತ್ಯಾಕರ್ಷಕ ಮೆರವಣಿಗೆಯೊಂದಿಗೆ ಹಸಿರುವಾಣಿ ಹೊರೆ ಕಾಣಿಕೆಯನ್ನು ನಿನ್ನೆ ಸಂಜೆ ಸಮರ್ಪಿಸಲಾಯಿತು. ಪಂಚಾಯತ್‌ ವ್ಯಾಪ್ತಿಯಲ್ಲಿ ಮಧೂರು ಕ್ಷೇತ್ರದ ಹೊರೆಕಾಣಿಕೆಗೆ ಪ್ರತೀ ಮನೆಯಿಂದ ಒಂದು ಕಿರುಕಾಣಿಕೆ ಎನ್ನುವ ರೀತಿಯ ವ್ಯಾಪಕ ಪ್ರಚಾರ ಫಲನೀಡಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು.
ಕಾವುಗೋಳಿ ಶಿವಕ್ಷೇತ್ರ ಸನ್ನಿಧಿಯಲ್ಲಿ ಬ್ರಹ್ಮಶ್ರೀ ಪ್ರಕಾಶ ಪಟ್ಟೇರಿಯವರು ಪ್ರಾರ್ಥನೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು. ಕಾವುಗೊಳಿ ವಿಭಾಗದ ಎರಿಯಾಕೋಟ ಶ್ರೀ ಭಗವತೀ ಕ್ಷೇತ್ರ, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ಬೆದ್ರಡ್ಕ, ಹರಿಜಾಲ್ ಶ್ರೀ ಮಹಾವಿಷ್ಣು ದೇವಸ್ಥಾನ, ಕೋರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಶಿವಮಂಗಿಲ ಫ್ರೆಂಡ್ಸ್, ಪೆರ್ನಡ್ಕ, ಶ್ರೀಕೃಷ್ಣ ಭಜನಾ ಮಂದಿರ ಪೆರಿಯಡ್ಕ, ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ರಕ್ತೇಶ್ವರೀ ಸಂಘ ಶಾಸ್ತಾ ನಗರ, ಬಳ್ಳೂರು ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರ ದೇಶಮಂಗಲ, ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನ ದೇಶಮಂಗಲ, ಶ್ರೀ ಪಿಲಡ್ಕತಾಯ ದೈವಸ್ಥಾನ ಬದಿಯಾರು ಬಳ್ಳೂರು ಮುಂತಾದ ದೇವಸ್ಥಾನ ಮಂದಿರ ಸಂಘ ಸಂಸ್ಥೆಗಳು ತರವಾಡು ಮನೆಯವರು ಸೇರಿದ 18 ವಾಹನಗಳಲ್ಲಿ ಪೆರ್ನಡ್ಕ ಭಂಡಾರ ಮನೆ ಬಳಿಯಿಂದ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್ ಪ್ರಾದೇಶಿಕ ಸಮಿತಿಯ ವೈಭವದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಆರಂಭಗೊಂಡಿತು.
ಅತ್ಯಾಕರ್ಷಕ ಮೆರವಣಿಗೆಗೆ,ವರ್ಣ ರಂಜಿತ ಮುತ್ತು ಕೊಡೆಗಳ ಮಹಿಳಾ ಸಮವಸ್ತ್ರಧಾರಿಗಳು, ನಾಸಿಕ್ ಬಾಂಡ್, ತಾಂಬೋಲ ಮೇಳಗಳು ,ಭಜನಾ ಸಂಕೀರ್ತನಾ ತಂಡಗಳು, ಕುಣಿತ ಭಜನಾ ತಂಡಗಳು, ಭಾರತಮಾತೆ, ಶಿವ ಪರಿವಾರ,ಯಕ್ಷಗಾನ, ಭರತನಾಟ್ಯ, ಮೋಹಿನಿಯಾಟಂ ವೇಷಧಾರಿಗಳು ವಿವಿಧ ಸಂಘ ಸಂಸ್ಥೆಗಳ ಸಮವಸ್ತ್ರ ಧರಿಸಿದ ಮಹಿಳೆಯರು, ಕೇಸರಿ ದೋತಿ ಬಿಳಿ ಅಂಗಿ ಧರಿಸಿದ ಮಹನೀಯರು ಯುವಕ, ಯುವತಿಯರು ಹಾಗೂ ಮಕ್ಕಳು ಸೇರಿ 2,000 ಕ್ಕಿಂತಲೂ ಮಿಕ್ಕಿದ ಭಕ್ತ ಜನತೆ ಹೆಜ್ಜೆ ಹಾಕಿದರು. ಪೆರ್ನಡ್ಕ, ಉಳಿಯುತ್ತಡ್ಕದ ಪ್ರದೇಶಗಳಲ್ಲಿ ಸಂಘ ಸಂಸ್ಥೆಗಳು ಪಾನೀಯ ವ್ಯವಸ್ಥೆ ಮಾಡಲಾಗಿತ್ತು. ಪಂಚಾಯತ್‌ ಸಮಿತಿ ಅಧ್ಯಕ್ಷ ಪದ್ಮನಾಭನ್‌ ಎರಿಯಾಕೋಟ, ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂ.ಬಿ ಆಚಾರ್‌ ಕಂಬಾರು, ಗ್ರಾಮ ಪಂಚಾಯತ್‌ ಸದಸ್ಯರಾದ ಪ್ರಮೀಳಾ ಮಜಲ್‌, ಕೆ.ಪಿ ಸಂಪತ್‌ ಕುಮಾರ್‌ ,ಗಿರೀಶ್, ಸುಲೋಚನ, ಮಲ್ಲಿಕ ಕಡಪ್ಪರ, ಪಂಚಾಯತ್‌ ಸಮಿತಿ ಪ್ರಮುಖರಾದ ಗಣೇಶ್‌ ನಾಯಕ್‌ ಬಳ್ಳೂರು, ಉಮೇಶ್‌ ಕಡಪ್ಪರ, ಶ್ರೀನಿ ಕೊರುವೈಲು, ಹರ್ಷವರ್ಧನ ನಾಯಕ್‌ ಕೊರುವೈಲು, ವಸಂತ ನಾಯಕ್‌ ಕೊರುವೈಲು, ನಾನು ವಾಸುದೇವ ಕಾರಂತ ಉಜಿರೆಕೆರೆ, ಬಾಲಕೃಷ್ಣ ಶೆಟ್ಟಿ ಬಳ್ಳೂರು, ಚಂದ್ರಹಾಸ ಶೆಟ್ಟಿ ಮಜಲು, ರಾಜೇಶ್‌ ಕಡಪ್ಪರ, ಲಕ್ಷ್ಮಣ ನೋಂಡ ಕೋಟೆಕುಂಜ, ಸುಬ್ರಹ್ಮಣ್ಯ ಕಾರಂತ, ಪ್ರಸನ್ನ ಕಾರಂತ ದೇಶಮಂಗಲ, ನಾರಾಯಣ ಪೂಜಾರಿ ಪುತ್ತೂರುಕೊಟ್ಯ, ಶೀನ ಶೆಟ್ಟಿ ಬಳ್ಳೂರು,ಸಚಿನ್ ಕಲ್ಲಂಗೈ, ರಕ್ಷಿತ್‌ ಪಾಟಾಳಿ, ಕೆ. ಶಶಿಧರ ಪಂಡಿತ್ ಕೆ.ಬಿ ಕಮಲಾಕ್ಷ, ಜಗದೀಶ ಆಚಾರ್ಯ ಕಂಬಾರು ಸುರೇಂದ್ರ ನಾಯಕ್‌ ಕೊರುವೈಲು, ವಿಜು ಕುಮಾರ್‌, ಸಂಜೀವ ಪೆರಿಯಡ್ಕ, ಸನತ್ ಪೆರ್ನಡ್ಕ, ಪ್ರಿಯಾ ಬಿ, ಸಂಧ್ಯಾ, ಗೀತಾ, ಶ್ರೀ ವಿದ್ಯಾ, ದೀಪ್ತಿ, ಶೋಭಾ, ಶೈಲಜಾ ಸುಕುಮಾರನ್‌, ಗೀತಾ ಬಾಲನ್, ಸರಳಾ, ನೀತಾ, ಕುಸುಮಾ ಮುಂತಾದವರು ಭಾಗವಹಿಸಿ ನೇತೃತ್ವ ನೀಡಿದರು. ಮಾಣಿಲಶ್ರೀಗಳು, ಹೊರೆ ಕಾಣಿಕೆ ಸಮಿತಿಯ ಪ್ರಮುಖರಾದ ರವೀಂದ್ರ ರೈ ಶಿರಿಬಾಗಿಲು, ಯೋಗೀಶ್ ಮಧೂರು ಮುಂತಾದವರು ಹೊರೆಕಾಣಿಕೆಯನ್ನು ಬರಮಾಡಿಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.