Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇಂದ್ರ ಕೈಗಾರಿಕಾ ಭಧ್ರತಾ ಪಡೆಯ D I G R. ಪೊನ್ನಿ IPS ಇಂದು ಬೆಳಗ್ಗೆ ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ.

ಕೇಂದ್ರ ಕೈಗಾರಿಕಾ ಭಧ್ರತಾ ಪಡೆಯ D I G R. ಪೊನ್ನಿ IPS ಇಂದು ಬೆಳಗ್ಗೆ ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ.
ಕುಂಬಳೆ: ಕೇಂದ್ರ ಕೈಗಾರಿಕಾ ಭಧ್ರತಾ ಪಡೆಯ (Central Industrial Security Force ) D I G R. ಪೊನ್ನಿ IPS ಅವರು ಇಂದು ಬೆಳಗ್ಗೆ ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ದಯಾರಾಜ, ಮ್ಯಾನೇಜರ್ ರಾಜಶೇಖರ್ ಏ ಸಿ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕುಮಾರ್, ಉಪಾಧ್ಯಕ್ಷರಾದ ಕೆ. ಸುಧಾಕರ್ ಕಾಮತ್, ಸಮಿತಿಯ ಸದಸ್ಯರಾದ ಕೆ. ಲಕ್ಷ್ಮಣ ಪ್ರಭು ಹಾಗೂ ಸಂಜೀವ ಎಂ ಉಪಸ್ಥಿತರಿದ್ದರು. ಕೇಂದ್ರ ಕೈಗಾರಿಕಾ ಬಧ್ರತಾ ಪಡೆಯ (Central Industrial Security Force ) ವತಿಯಿಂದ ಕರಾವಳಿ ಭದ್ರತೆ ಹಾಗೂ ಮಾದಕ ವಸ್ತುಗಳ ವಿರುದ್ದವಾಗಿ ಜಾಗೃತಿ ಮೂಡಿಸಲು ಇದೇ ತಿಂಗಳು ಮಾರ್ಚ್ 7 ರಿಂದ ಗುಜರಾತ್ ನಿಂದ ಪ್ರಾರಂಭಗೊಂಡು ತಿರುವನಂತಪುರದವರೆಗೆ ತೆರಳಲಿರುವ ಸೈಕಲ್ ರ್ಯಾಲಿ ಯು ಇದೇ ತಿಂಗಳು 27 ರಂದು ಬೆಳಗ್ಗೆ 10.30 ಕ್ಕೆ ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ತಲುಪಲಿದೆ. ಈ ಸಂದರ್ಭದಲ್ಲಿ ಕಣಿಪುರ ಶ್ರೀ ಗೋಪಾಲಕೃಷ್ಣ ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿಯ ವತಿಯಿಂದ ಅವರಿಗೆ ಸ್ವಾಗತಿಸುವ ಕಾರ್ಯಕ್ರಮವನ್ನು ಹೆಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಾತೆಯರು, ಮಕ್ಕಳು ಹಾಗೂ ದೇಶ ಪ್ರೇಮಿಗಳು ಆಗಮಿಸಬೇಕಾಗಿ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.