ಮಂಜೇಶ್ವರ ಪೊಲೀಸ್ ಠಾಣೆಗೆ ಕೊಡುಗೈದಾನಿ ಶ್ರೀ ಸದಾಶಿವ ಶೆಟ್ಟಿ ಕುಳೂರುರವರಿಂದ ಎರಡೆರಡು ಲ್ಯಾಪ್ಟಾಪ್, ಪ್ರಿಂಟರ್, ಸ್ಕ್ಯಾನರ್ ಕೊಡುಗೆ.
ಮಾರ್ಚ್ 25, 2025
0
ಮಂಜೇಶ್ವರ ಪೊಲೀಸ್ ಠಾಣೆಗೆ ಕೊಡುಗೈದಾನಿ ಶ್ರೀ ಸದಾಶಿವ ಶೆಟ್ಟಿ ಕುಳೂರುರವರಿಂದ ಎರಡೆರಡು ಲ್ಯಾಪ್ಟಾಪ್, ಪ್ರಿಂಟರ್, ಸ್ಕ್ಯಾನರ್ ಕೊಡುಗೆ.
ಮಂಜೇಶ್ವರ: ಪೊಲೀಸ್ ಸ್ಟೇಷನ್ ನ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳ ಮನವಿ ಮೇರೆಗೆ ಮಂಜೇಶ್ವರ ಪೊಲೀಸ್ ಸ್ಟೇಷನ್ ಗೆ 2 ಲ್ಯಾಪ್ಟಾಪ್ ಹಾಗೂ 2 ಪ್ರಿಂಟರ್ ಮತ್ತು ಸ್ಕ್ಯಾನರ್ ರನ್ನ ಕೊಡುಗೈದಾನಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನರವರು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಇಂದು ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಿದರು. ಈ ವೇಳೆ ಸದಾಶಿವ ಶೆಟ್ಟಿಯವರ ಸಾಮಾಜಿಕ ಕಾರ್ಯ ಹಾಗೂ ಸೇವೆಯನ್ನು ಸ್ಮರಿಸಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳ ಪರವಾಗಿ ಶಾಲು ಹೊದಿಸಿ, ಫಲಪುಷ್ಪಗಳನ್ನು ನೀಡಿ ಸದಾಶಿವ ಶೆಟ್ಟಿ ಯವರನ್ನು ಹಾಗೂ ಸಹೋದರ ಚಂದ್ರಹಾಸ ಶೆಟ್ಟಿಯವರನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು
ಮಂಜೇಶ್ವರ ಪೊಲೀಸ್ ಠಾಣಾಧಿಕಾರಿ ಅನೂಪ್ ಕುಮಾರ್ ಇ. ವಹಿಸಿದರು. ವೇದಿಕೆಯಲ್ಲಿ ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ರಾಜೇಶ್ ಕುಮಾರ್, ಸದಾಶಿವ ಶೆಟ್ಟಿಯವರ ಸಹೋದರ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಉಪಸ್ಥಿತರಿದ್ದು, ಶುಭಾಸಂಶಣೆಗೈದರು. ಈ ವೇಳೆ ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗದ ಪದಾಧಿಕಾರಿಗಳಾದ ಕೆ. ನಾರಾಯಣ ನಾಯ್ಕ್ ನಡುಹಿತ್ತಿಲು, ಕುಳೂರು, ಕಾರ್ತಿಕ್ ಶೆಟ್ಟಿ ಮಜಿಬೈಲು, ಚಂದ್ರಹಾಸ ಮೀಯಪದವು, ಜಯರಾಜ್ ಶೆಟ್ಟಿ ಚಾರ್ಲ, ಜಯರಾಜ್ ಜಿ.ಶೆಟ್ಟಿ ಕುಳೂರು, ಸುಬ್ಬಣ್ಣ ಆಳ್ವ ಮೀಯಪದವು, ವಿಜಯ ಕುಮಾರ್ ರೈ, ಚಂದ್ರಕಾಂತ ಶೆಟ್ಟಿ ಇಚ್ಚಿಲಂಗೊಂಡು, ಜಯರಾಮ ಶೆಟ್ಟಿ ಕುಳೂರು, ಶಿವಾನಂದ ಶೆಟ್ಟಿ ಕೋಡಿಮಾರ್ ಮೊದಲಾದವರು ವಿತರಿಸಿದ ನಿಯೋಗದಲ್ಲಿದ್ದರು. ಮಂಜೇಶ್ವರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಉಮೇಶ್ ಕೆ ಸ್ವಾಗತಿಸಿ, ಮಂಜೇಶ್ವರ ಪೊಲೀಸ್ ಠಾಣೆಯ ರೈಟರ್ ಸಿಯಾದ್ ವಂದಿಸಿದರು.









