ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ ಅಂಗವಾಗಿ ಉದ್ಯಾವರ ಮಾಡ ಕ್ಷೇತ್ರ ಪರಿಸರದಿಂದ ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆ.
ಮಾರ್ಚ್ 02, 2025
0
ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವ ಅಂಗವಾಗಿ
ಉದ್ಯಾವರ ಮಾಡ ಕ್ಷೇತ್ರ ಪರಿಸರದಿಂದ ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆ.
ಮಂಜೇಶ್ವರ: ಕೀರ್ತೇಶ್ವರ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಅಷ್ಟಬಂಧ ಬಹ್ಮಕಲಶೋತ್ಸವದ ಅಂಗವಾಗಿ ನಿನ್ನೆ ಸಂಜೆ
ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದಿಂದ ಹಸಿರು ವಾಣಿ ಹೊರೆಕಾಣಿಕೆಯ ಭವ್ಯ ಶೋಭಾಯಾತ್ರೆ ಕ್ಷೇತ್ರಕ್ಕೆ ಹರಿದು ಬಂತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಲ್ಚಪ್ಪಾಡರವರು ವಿಶೇಷ ಪ್ರಾರ್ಥನೆ ನೆರವೇರಿಸಿದರು. ಶ್ರೀ ಕ್ಷೇತ್ರ ಮಾಡದ ಅಣ್ಣ ದೈವದ ಸೇವಕರಾದ ಬೀರು ಚೌಟರು, ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಪ್ಪಾಡ, ಮುಂಡತ್ತಾಯ ದೈವದ ಪಾತ್ರಿ ಮಂಜು ಬೆಲ್ಚಪ್ಪಾಡ, ಐಸ್ರಾಲು ಗುತ್ತಿನ
ಮಂಜು ಭಂಡಾರಿ ಯಾನೆ ಸುಕುಮಾರ ಶೆಟ್ಟಿ, ಮೋಯಿಸ್ರಾಲು ಗುತ್ತಿನ ತಿಮ್ಮ ಭಂಡಾರಿ, ಓಮಯ ಯು ಯಾನೆ ಮಂಜು ಉದ್ಯಾವರ ಮಾಡ, ಶ್ರೀಯಾನ್ ಕುಟುಂಬಸ್ಥರಾದ ಉದಯ ಪೂಜಾರಿ, ಸುರೇಂದ್ರ ಗುರಿಕಾರ ಪಡುಸ್ಥಾನ, ಸುನಿಲ್ ಗುರಿಕಾರ ಕೀರ್ತೇಶ್ವರ, ರಮೇಶ್ ಗುರಿಕಾರರು ಹೊಸಹಿತ್ತು,
ಶ್ರೀ ವೀರಭದ್ರ ಮಹಮ್ಮಾಯೀ ಕ್ಷೇತ್ರದ ಧೂಮಾವತಿ ದೈವದ ಪಾತ್ರಿ ವಸಂತ ಶೆಟ್ಟಿಗಾರ್, ಶ್ರೀ ಕ್ಷೇತ್ರ ಮಾಡದ ನಿಕಟ ಪೂರ್ವ ಆಡಳಿತ ಮೊಕ್ತೇಸರ ಡಾ. ಜಯಪಾಲ್ ಶೆಟ್ಟಿ, ತೂಮಿನಾಡು ಬ್ರಹ್ಮ ಶ್ರೀ ಮೊಗೇರ ಮಹಾಕಾಳಿ ಕ್ಷೇತ್ರದ ಜಯಂತ ಎಂ, ಉದ್ಯಾವರ ಶ್ರೀ ಭಗವತೀ ಕ್ಷೇತ್ರದ ರಘು ಕಾರ್ನವರು, ಕನಿಲ ಶ್ರೀ ಭಗವತೀ ಕ್ಷೇತ್ರದ ಮಂಜಪ್ಪ ಕಾರ್ನವರು ಮೊದಲಾದವರು ಉಪಸ್ಥಿತರಿದ್ದರು. ಹೋರೆಕಾಣಿಕೆ ಮೆರವಣಿಗೆಯ ಶೋಭಾಯಾತ್ರೆಯಲ್ಲಿ ಕಲ್ಲಡ್ಕದ ಗೊಂಬೆ, ಕೀಲು ಕುದುರೆ, ಮಾತೆಯರ ಮುತ್ತು ಕೊಡೆ, ತಾಲೀಮು ಪ್ರದರ್ಶನ, ಕೇರಳದ ಸಿಂಗಾರಿ ಮೇಳ, ವಿವಿಧ ಸಂಘ ಸಂಸ್ಥೆ, ಮಠ, ಮಂದಿರ, ಕ್ಷೇತ್ರಗಳ ಹೊರೆ ಕಾಣಿಕೆ ಸಿಂಗರಿಸಿದ ವಾಹನದಲ್ಲಿ ಕ್ಷೇತ್ರಕ್ಕೆ ಆಗಮಿಸಿತು. ಈ ವೇಳೆ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಯವರು ಸ್ವಾಗತ ನೀಡಿದರು. ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಸಾಂಸ್ಕತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ರವೀಶ್ ಭಟ್, ಪ್ರಧಾನ ಅರ್ಚಕರು, ಕೀರ್ತೇಶ್ವರವರ ಪ್ರಾಯೋಜಕತ್ವದಲ್ಲಿ ವಸುಂಧರಾ ಯಕ್ಷಗಾನ ಅಧ್ಯಯನ ಕೇಂದ್ರ ಮಂಜೇಶ್ವರ ಇವರ ವತಿಯಿಂದ "ಸುದರ್ಶನ ವಿಜಯ" ಎಂಬ ಯಕ್ಷಗಾನ ಬಯಲಾಟ, ಕು.ಅಧಿತಿ ಗಾಣಿಗ, ಟೀಮ್ ಬನ್ ವಾರಿ, ಕುಡುಪು, ಮಂಗಳೂರು ಇವರಿಂದ ಭಕ್ತಿಗಾನ ವೈಭವ ನಡೆಯಿತು.
















