ನಿವೃತ್ತ ಅಧ್ಯಾಪಕ, ಮಂಜೇಶ್ವರ ಕೀರ್ತೆಶ್ವರ ದೇವಸ್ಥಾನ ಬಳಿಯ ನಿವಾಸಿ ಜಯಂತ ಮಾಸ್ಟರ್ ನಿಧನ.
ಮಾರ್ಚ್ 11, 2025
0
ನಿವೃತ್ತ ಅಧ್ಯಾಪಕ, ಮಂಜೇಶ್ವರ ಕೀರ್ತೆಶ್ವರ ದೇವಸ್ಥಾನ ಬಳಿಯ ನಿವಾಸಿ ಜಯಂತ ಮಾಸ್ಟರ್ ನಿಧನ.
ಮಂಜೇಶ್ವರ: ನಿವೃತ್ತ ಅಧ್ಯಾಪಕರಾದ ಮಂಜೇಶ್ವರ ಕೀರ್ತೆಶ್ವರ ದೇವಸ್ಥಾನ ಬಳಿಯ ನಿವಾಸಿ ಜಯಂತ ಮಾಸ್ಟರ್ (60) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಸಂಜೆ ನಿಧನ ಹೊಂದಿದರು. ಬಳಿಕ ಸ್ವ - ಗೃಹ ಕೀರ್ತೆಶ್ವರದಲ್ಲಿ ಮೃತರ ಅಂತಿಮ ದರ್ಶನಕ್ಕೆ ಇರಿಸಿ, ಅಂತ್ಯಕ್ರಿಯೆ ರಾತ್ರಿ ಮಿಯಪದವು ಮೈತಾಳ್ ನಲ್ಲಿ ನಡೆಯಿತು. ಮೃತರು ದಿವಂಗತರಾದ ಐತ್ತು ಮೂಲ್ಯ - ಅಕ್ಕಮ್ಮ ದಂಪತಿಯ ಪುತ್ರನಾಗಿದ್ದು, ಪತ್ನಿ: ಯೋಗಿತ (ಮಿಯಪದವು ವಿದ್ಯಾವರ್ಧಕ ಶಾಲಾ ಅಧ್ಯಾಪಕಿ), ಮಕ್ಕಳಾದ ರವಿರಾಜ್, ಧನ್ಯಶ್ರೀ, ಸಹೋದರ: ಹಿರಿಯ ವ್ಯಾಪಾರಿ ಚಂದ್ರಶೇಖರ ಮೀಯಪದವು, ಸಹೋದರಿಯರಾದ: ಸುನೀತಾ, ವಸಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಮಂಜೇಶ್ವರ ಪೊಲೀಸ್ ಠಾಣೆ ಬಳಿ ಇರುವ ಸರಕಾರಿ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು ಬಳಿಕ ನಿವೃತ್ತರಾಗಿದ್ದರು. ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಜಿಲ್ಲಾ ಕಾನೂನು ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಜೇಶ್ವರ ತಾಲೂಕು ಕುಲಾಲ ಸಂಘದ ಕೋಶಾಧಿಕಾರಿಯಾಗಿ, ಮೀoಜ ಪಂಚಾಯತ್ ಕುಲಾಲ ಸಂಘದ ಸಂಘಟಕರಾಗಿ, KMSSS ಸಂಘಟನೆಯ ರಾಜ್ಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಕೀರ್ತೆಶ್ವರ ದೇವಸ್ಥಾನದಲ್ಲಿ 8 ದಿನಗಳ ಕಾಲ ನಡೆದ ಬ್ರಹ್ಮಕಲಶೋತ್ಸವ ವೇಳೆ ಇವರ ಮನೆಯ ಅಂಗಳದಲ್ಲಿ ಅಥಿತಿ ಅಭ್ಯಾಗತರಿಗೆ ಮಧ್ಯಾಹ್ನದ ಊಟೋಪಚಾರ ವಿತರಣೆಗೆ ವ್ಯವಸ್ಥೆ ಕಲ್ಪಿಸಿದ್ದರು. ಅಲ್ಲದೆ ಕ್ಷೇತ್ರದ ಭಕ್ತರಾಗಿದ್ದರು. ಉತ್ಸವಕ್ಕೆ ತಮ್ಮಿಂದಾದ ಸೇವೆಯನ್ನು ಸಲ್ಲಿಸಿದ್ದರು.

