ಜ್ಯೋತಿಷ್ ಅಭಿಮಾನಿ ಸೇವಾ ಬಳಗದಿಂದ "ಆಲ್ ಇಂಡಿಯಾ ಲೆವೆಲ್ ಇನ್ವಿಟೇಶನ್ ಕಬ್ಬಡಿ ಟೂರ್ನಮೆಂಟ್ - 2025" ಏಪ್ರಿಲ್ 27 ರಂದು ಕಾಸರಗೋಡಿನಲ್ಲಿ. ನೂತನ ಸಮಿತಿ ರಚನೆ.
ಮಾರ್ಚ್ 11, 2025
0
ಜ್ಯೋತಿಷ್ ಅಭಿಮಾನಿ ಸೇವಾ ಬಳಗದಿಂದ "ಆಲ್ ಇಂಡಿಯಾ ಲೆವೆಲ್ ಇನ್ವಿಟೇಶನ್ ಕಬ್ಬಡಿ ಟೂರ್ನಮೆಂಟ್ - 2025" ಏಪ್ರಿಲ್ 27 ರಂದು ಕಾಸರಗೋಡಿನಲ್ಲಿ. ನೂತನ ಸಮಿತಿ ರಚನೆ.
ಕಾಸರಗೋಡು: ಜ್ಯೋತಿಷ್ ಅಭಿಮಾನಿ ಸೇವಾ ಬಳಗ
ಕಾಸರಗೋಡು ವತಿಯಿಂದ ಆಲ್ ಇಂಡಿಯಾ ಲೆವೆಲ್ ಇನ್ವಿಟೇಶನ್ ಕಬ್ಬಡಿ ಟೂರ್ನಮೆಂಟ್ 2025 ಏಪ್ರಿಲ್ 27 ರಂದು ಕಾಸರಗೋಡಿನಲ್ಲಿ ನಡೆಯಲಿದ್ದು, ಕಾರ್ಯಕ್ರಮದ ರೂಪುರೇಷೆಗಾಗಿ ಕಾಸರಗೋಡಿನಲ್ಲಿ ವಿಶೇಷ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಶಂಕರ್ ಜೆ. ಪಿ ನಗರ ವಹಿಸಿದರು. ದಿನೇಶ್ ಬಂಬ್ರಾಣ ಸ್ವಾಗತಿಸಿದರು. ಜಯರಾಜ್ ಶೆಟ್ಟಿ ಕುಳೂರು, ರವೀಂದ್ರನ್ ಕುತ್ತಿಕೋಲ್, ಮನೋಜ್ ಕಡಪ್ಪುರರ ಉಪಸ್ಥಿತಿಯಲ್ಲಿ ಸಮಿತಿ ರಚನೆ ಮಾಡಲಾಯಿತು. ಸಮಿತಿ ಚೇರ್ ಮ್ಯಾನ್ ರಾಗಿ ಜಯರಾಜ್ ಶೆಟ್ಟಿ ಕುಳೂರು, ಕನ್ವೀನರ್ ರಾಗಿ ಶಂಕರ್ ಜೆ. ಪಿ ನಗರ ಮತ್ತು ಕೋಶಾಧಿಕಾರಿಯಾಗಿ ಭರತ್ ಕನಿಲರವರನ್ನು ಆಯ್ಕೆ ಮಾಡಲಾಯಿತು.