Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂಗಲ್ಪಾಡಿ ಪಂಚಾಯತ್ ನಲ್ಲಿ ವಯನಾಡು ಸಂತ್ರಸ್ತರಿಗೆ ಹಂಚಲು ಸಂಗ್ರಹಿಸಿದ ಅತ್ಯಾವಶ್ಯಕ ವಸ್ತುಗಳು ಮಾಯ. ಎಸ್.ಡಿ‌.ಪಿ‌.ಐಯಿಂದ ಪ್ರತಿಭಟನಾ ಮಾರ್ಚ್.

ಮಂಗಲ್ಪಾಡಿ ಪಂಚಾಯತ್ ನಲ್ಲಿ ವಯನಾಡು ಸಂತ್ರಸ್ತರಿಗೆ ಹಂಚಲು ಸಂಗ್ರಹಿಸಿದ ಅತ್ಯಾವಶ್ಯಕ ವಸ್ತುಗಳು ಮಾಯ. ಎಸ್.ಡಿ‌.ಪಿ‌.ಐಯಿಂದ ಪ್ರತಿಭಟನಾ ಮಾರ್ಚ್.
ಉಪ್ಪಳ: ವಯನಾಡು ದುರಂತದ ಸಂತ್ರಸ್ತರಿಗಾಗಿ ಸಂಗ್ರಹಿಸಲಾದ ಅತ್ಯಾವಶ್ಯಕ ವಸ್ತುಗಳನ್ನು ಮಂಗಲ್ಪಾಡಿ ಅಡಳಿತ ಸಮಿತಿ ಸದಸ್ಯರುಗಳು ಮತ್ತು ಮುಸ್ಲಿಂ ಲೀಗ್ ಮುಖಂಡರುಗಳು ಸೇರಿ ಮಾರಾಟ ಮಾಡಿದ ಘಟನೆಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಕಛೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿತು. ಮುಸ್ಲಿಂ ಲೀಗ್ ಆಡಳಿತದ ಕೆಳಗೆ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ಹಿಂದಿನಿಂದಲೂ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದೆಯೆಂದೂ ಇದು ಒಂದೇ ಪ್ರಕರಣವಲ್ಲದೆ ಬದಲಾಗಿ ಮುಸ್ಲಿಂ ಲೀಗ್ ಆಡಳಿತದ ಕೆಳಗೆ ನಿರಂತರವಾಗಿ ನಡೆಯುತ್ತಿರುವ ಭ್ರಷ್ಟಾಚಾರದ ಭಾಗವಾಗಿದೆ ಈ ಪ್ರಕರಣವೆಂದು ಎಸ್.ಡಿ.ಪಿ.ಐ ನೇತಾರರು ಆರೋಪಿಸಿದರು. ಸಮಗ್ರ ವಿಚಾರಣೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಪಂಚಾಯತ್ ಅಧ್ಯಕ್ಷ ಹಾಗೂ ಇತರ ಮೂರು ಸದಸ್ಯರು ರಾಜೀನಾಮೆ ಸಲ್ಲಿಸಬೇಕೆಂಬುವುದು ಪ್ರತಿಭಟನಾ ಮಾರ್ಚ್ ನ ಪ್ರಧಾನ ಬೇಡಿಕೆಯಾಗಿತ್ತು. ಪ್ರತಿಭಟನಾ ಮಾರ್ಚನ್ನು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷ ಶರೀಫ್ ಪಾವೂರು ಉದ್ಘಾಟಿಸಿದರು. ಎಸ್.ಡಿ.ಪಿ.ಐ ಮಂಗಲ್ಪಾಡಿ ಸಮಿತಿ ಉಪಾಧ್ಯಕ್ಷ ಹುಸೈನ್ ಬಂದಿಯೋಡ್ ಅಧ್ಯಕ್ಷತೆ ವಹಿಸಿದರು, ಮಂಡಲ ಉಪಾಧ್ಯಕ್ಷರುಗಳಾದ ಅನ್ವರ್ ಆರಿಕ್ಕಾಡಿ ಹಾಗೂ ಮಜೀದ್ ವರ್ಕಾಡಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಹೊಸಂಗಡಿ ಮೊದಲಾದವರು ಮಾತನಾಡಿದರು. ಎಸ್.ಡಿ.ಪಿ.ಐ ಮಂಗಲ್ಪಾಡಿ ಪಂಚಾಯತ್ ಕಾರ್ಯದರ್ಶಿ ಇಮ್ತಿಯಾಝ್ ಸ್ವಾಗತಿಸಿ ಸಮಿತಿ ಸದಸ್ಯ ಸಲೀಂ ಬೈದಳ ಧನ್ಯವಾದವನ್ನಿತ್ತರು.
ಮಂಗಲ್ಪಾಡಿ ನಯಬಝಾರಿನ ತಾಲೂಕು ಕಛೇರಿ ಮುಂಬಾಗದಿಂದ ಆರಂಭಿಸಿದ ಪ್ರತಿಭಟನಾ ಮಾರ್ಚ್ ಮಂಗಲ್ಪಾಡಿ ಪಂಚಾಯತ್ ಕಛೇರಿ ಪರಿಸರದಲ್ಲಿ ಪೋಲೀಸರು ತಡೆದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.