ಸಂತಡ್ಕದ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಮೆರವಣಿಗೆಯ ವೇಳೆ ಸಿಹಿತಿಂಡಿ ಹಾಗೂ ಪಾನೀಯ ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಭಾಂದವರು.
ಜನವರಿ 19, 2025
0
ಸಂತಡ್ಕದ ಬ್ರಹ್ಮಕಲಶೋತ್ಸವದ ಹಸಿರು ಹೊರೆಕಾಣಿಕೆ ಮೆರವಣಿಗೆಯ ವೇಳೆ ಸಿಹಿತಿಂಡಿ ಹಾಗೂ ಪಾನೀಯ ನೀಡಿ ಸೌಹಾರ್ದತೆ ಮೆರೆದ ಮುಸ್ಲಿಂ ಭಾಂದವರು.
ಮಂಜೇಶ್ವರ: ಸಂತಡ್ಕ ಶ್ರೀ ಅರಸು ಸಂಕಲ ದೈವಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಇಂದು ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ನಡೆದ ಹಸಿರು ಹೊರೆಕಾಣಿಕೆ ಮೆರವಣಿಗೆಯ ವೇಳೆ ಸಂತಡ್ಕ ದಾರುಲ್ ಇಸ್ಲಾಂ ಜುಮ್ಮಾ ಮಸೀದಿ ಸಂತಡ್ಕ ಮತ್ತು ಹನಫಿ ಜುಮ್ಮಾ ಮಸೀದಿ ಸಂತಡ್ಕ ವತಿಯಿಂದ ಸಂತಡ್ಕದಲ್ಲಿ ಪಾನೀಯ ಹಾಗೂ ಸಿಹಿತಿಂಡಿ ವಿತರಣೆ ವಿತರಿಸುವುದದೊಂದಿಗೆ ಕೋಮು ಸೌಹಾರ್ದತೆ ಮೆರೆದರು. ಮಸೀದಿಗಳ ಅಧ್ಯಕ್ಷರುಗಳಾದ ಮೊಹಮ್ಮದ್ ಹಾಜಿ ಕಂಚಿಲ ಮತ್ತು
ಶೇಖ್ ಖಾಸಿಂ ಸಾಹೇಬ್ ನೇತೃತ್ವದಲ್ಲಿ ಮೆರವಣಿಗೆಯನ್ನು ಆದರಪೂರ್ವಕವಾಗಿ ಸ್ವಾಗತಿಸಿದರು. ಮಸೀದಿ ಹಾಗೂ ಪರಿಸರದ ಮುಸ್ಲಿಂ ಭಾಂದವರು ಸಿಹಿತಿಂಡಿ ಹಾಗೂ ಪಾನಿಯವನ್ನು ಮೆರವಣಿಗೆಯಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರಿಗೆ ವಿತರಿಸಿ, ಭಕ್ತರ ದಾಹವನ್ನು ನಿವಾರಿಸಿ, ಸೌಹಾರ್ದತೆಯನ್ನು ಮೆರೆದು, ಬ್ರಹ್ಮಕಲಶೋತ್ಸವಕ್ಕೆ ಶುಭವನ್ನು ಹಾರೈಸಿದರು. ಬ್ರಹ್ಮಕಲಶೋತ್ಸವವು ಇಂದಿನಿಂದ ವಿವಿಧ ವೈದಿಕ, ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡಿದ್ದು 22 ರ ವರೆಗೆ ಜರುಗಿ ಬಳಿಕ 23 ರಿಂದ 24 ರ ತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.









