ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ (ಕ್ಯಾಂಪ್ಕೋ) ಮುಳ್ಳೇರಿಯಾ ಶಾಖೆಯ ಸದಸ್ಯ ಬೆಳೆಗಾರರ ಸಭೆ.
ಜನವರಿ 04, 2025
0
ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ (ಕ್ಯಾಂಪ್ಕೋ) ಮುಳ್ಳೇರಿಯಾ ಶಾಖೆಯ ಸದಸ್ಯ ಬೆಳೆಗಾರರ ಸಭೆ.
ಮುಳ್ಳೇರಿಯಾ: ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ (ಕ್ಯಾಂಪ್ಕೋ) ನಿಯಮಿತ ಮುಳ್ಳೇರಿಯಾ ಶಾಖೆಯ ಸದಸ್ಯ ಬೆಳೆಗಾರರ ಸಭೆ ಇಂದು ಬೆಳಗ್ಗೆ ಮುಳ್ಳೇರಿಯಾ ಶ್ರೀ ಗಣೇಶ ಮಂದಿರದಲ್ಲಿ ನಡೆಯಿತು. ಸಭೆಯನ್ನು ಹಿರಿಯ ಸದಸ್ಯರಾದ ಪದ್ಮಶ್ರೀ ಪುರಸ್ಕೃತ ಸತ್ಯನಾರಾಯಣ ಬೆಳ್ಳೇರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಇವರ ಜೊತೆ
ಹಿರಿಯ ಬೆಳೆಗಾರರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಮೋನಪ್ಪ ಆಳ್ವ, ನಾರಾಯಣ ನಾಯ್ಕ, ಶ್ರೀಮತಿ ಸುಷ್ಮಾ ಚಂದ್ರ, ಶಿವರಾಮ ಮಣಿಯಾಣಿ ಕೈ ಜೋಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷರಾದ: ಎ. ಕಿಶೋರ್ ಕುಮಾರ್ ಕೊಡ್ಗಿ ವಹಿಸಿದ್ದರು. ವೇದಿಕೆಯಲ್ಲಿ ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂಕರ ನಾರಾಯಣ ಭಟ್ ಖಂಡಿಗೆ ಮಾತನಾಡಿ ಕ್ಯಾಂಪ್ಕೋದ ಸಕ್ರೀಯ ಸದಸ್ಯರಿಗೆ ಇರುವ ಆರೋಗ್ಯ ಯೋಜನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ವಿ ಸತ್ಯನಾರಾಯಣರವರು ಮಾತನಾಡಿ ಕ್ಯಾಂಪ್ಕೋದ ವಹಿವಾಟುಗಳ ವಿವರ ನೀಡಿ ಸದಸ್ಯರ ಹಿತ ರಕ್ಷಣೆ ಮಾಡುವಲ್ಲಿ ಕ್ಯಾಂಪ್ಕೋ ಸದಾ ಕಂಕಣ ಬದ್ಧವಾಗಿದೆ ಎಂದು ನುಡಿದರು. ಈ ವೇಳೆ ಕ್ಯಾಂಪ್ಕೋ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್ ಕಯಂಪಾಡಿ, ರಾಘವೇಂದ್ರ ಭಟ್ ಕೆದಿಲ, ಜಯರಾಮ ಸರಳಾಯ, ಕೃಷ್ಣ ಪ್ರಸಾದ್ ಮಡ್ತಿಲ, ಬಾಲಕೃಷ್ಣ ರೈ ಬಾನೋಟ್ಟು, ಪದ್ಮರಾಜ ಪಟ್ಟಾಜೆ, ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ, ರಾಧಾಕೃಷ್ಣ ಕೆ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಕ್ಯಾಂಪ್ಕೋ ಮಾರುಕಟ್ಟೆ ವಿಭಾಗದ ಅಧಿಕಾರಿಗಳಾದ ಗೋವಿಂದ ಭಟ್ ಮೊದಲಾದವರು ಉಪಸ್ಥಿತರಿದ್ದು, ಮಾತನಾಡಿದರು. ಬಳಿಕ ಕೃಷಿಕ ಬೆಳೆಗಾರರ ಜೊತೆಗೆ ಸಂವಾದ ಕಾರ್ಯಕ್ರಮ ನಡೆಯಿತು. ಕ್ಯಾಂಪ್ಕೋ ನಿರ್ದೇಶಕರಾದ ಸತ್ಯನಾರಾಯಣ ಪ್ರಸಾದ್ ಕಯಂಪಾಡಿ ಸ್ವಾಗತಿಸಿ, ಬಾಲ ಸುಬ್ರಹ್ಮಣ್ಯ ಭಟ್ ಕೋಳಿಕ್ಕಜೆ ಪ್ರಾರ್ಥನೆ ಹಾಡಿ, ಬದಿಯಡ್ಕ ಕ್ಯಾಂಪ್ಕೋದ ರೀಜಿನಲ್ ಮೆನೆಜರ್ ಚಂದ್ರ ಎಂ ಕಾರ್ಯಕ್ರಮ ನಿರೂಪಿಸಿ, ಕ್ಯಾಂಪ್ಕೋ ಕಾಸರಗೋಡು ಶಾಖಾ ಪ್ರಬಂಧಕರಾದ ವಿನೋದ್ ಆವಂದೂರು ವಂದಿಸಿದರು.



