Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮೀಯಪದವು: ಕುಳೂರು ಆದರ್ಶನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹರಿ ಭಜನಾ ಮಂದಿರದ ಪ್ರವೇಶ ಹಾಗೂ ಸ್ವರ್ಣ ಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ (ನಾಳೆ) 11 ರಿಂದ 13 ರ ವರೆಗೆ.

ಮೀಯಪದವು: ಕುಳೂರು ಆದರ್ಶನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹರಿ ಭಜನಾ ಮಂದಿರದ ಪ್ರವೇಶ ಹಾಗೂ ಸ್ವರ್ಣ ಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ (ನಾಳೆ) 11 ರಿಂದ 13 ರ ವರೆಗೆ.
ಮಂಜೇಶ್ವರ: ಮಿಂಜ ಗ್ರಾಮ ಪಂಚಾಯತ್ ಗೊಳಪಟ್ಟ ಮೀಯಪದವು ಬಳಿಯ ಕುಳೂರು ಆದರ್ಶನಗರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಹರಿ ಭಜನಾ ಮಂದಿರದ ಪ್ರವೇಶ ಹಾಗೂ ಸ್ವರ್ಣ ಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವ ನಾಳೆ 11 ರಿಂದ ಮೊದಲ್ಗೊಂಡು 13 ರ ವರೆಗೆ ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉರ್ಮಿ ಪೌರೋಹಿತ್ಯದೊಂದಿಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಲಿದೆ. ಆ ಪ್ರಯುಕ್ತ ನಾಳೆ 11 ರಂದು ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಡಲಿದೆ. ಬಳಿಕ ಸಂಜೆ 6 ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉದ್ಘಾಟಿಸಲಿರುವರು. ಮಂದಿರ ಸೇವಾ ಸಮಿತಿ ಅಧ್ಯಕ್ಷೆ ಶ್ರೀಮತಿ ಕೃಷ್ಣವೇಣಿ ಡಿ ಶೆಟ್ಟಿ ಕುಳೂರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಸೇವಾ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಪಿ.ಆರ್. ಶೆಟ್ಟಿ ಕುಳೂರು ಪೊಯ್ಯಲು, ಮುಂಬೈ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು ಉಪಸ್ಥಿತರಿರುವರು. ಧಾರ್ಮಿಕ ಮುಂದಾಳುಗಳಾದ ಅರಿಬೈಲು ಗೋಪಾಲಶೆಟ್ಟಿ, ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು, ಕಿರಣ್ ಶೆಟ್ಟಿ ಮಾಡ, ಉದ್ಯಮಿ ಹರೀಶ್ ಭಂಡಾರಿ ಕೌಡೂರುಬೀಡು, ಮೀಂಜ ಗ್ರಾಮ ಪಂ. ಅಧ್ಯಕ್ಷೆ ಸುಂದರಿ ಆರ್.ಶೆಟ್ಟಿ, ಉದ್ಯಮಿ ನಾರಾಯಣ ಸಂತಡ್ಕ, ಸಾಮಾಜಿಕ - ಧಾರ್ಮಿಕ ಮುಂದಾಳು ಕಾರ್ತಿಕ್ ಶೆಟ್ಟಿ ಮಜಿಬೈಲು, ಉದ್ಯಮಿ ಪ್ರಕಾಶ್ ಶೆಟ್ಟಿ ಬೆಜ್ಜಂಗಳ, ವಿದ್ಯಾಧರ ಶೆಟ್ಟಿ ಹೊಸಮನೆ ಕುಳೂರು, ಮನೋಜ್ ಹೊಸಕಟ್ಟೆ, ಜನಾರ್ದನ ಪೂಜಾರಿ, ಮಾಲತಿ, ದಿನಕರ ಶೆಟ್ಟಿ ಚಾರ್ಲ, ಸುಬ್ರಾಯ ಆಚಾರ್ಯ ಕಾಯರ್ ತೊಟ್ಟಿ, ಕೊರಗಪ್ಪ, ಮಾಧವ ಕೆ ಕುಳೂರು ಭಾಗವಹಿಸುವರು. ಬಳಿಕ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ಕಾರ್ಯಕ್ರಮ ಜರುಗಲಿವೆ.12 ರಂದು ಬೆಳಿಗ್ಗೆ 9 ಕ್ಕೆ ಮಂದಿರ ಪ್ರವೇಶ, ಸ್ವರ್ಣಲೇಪಿತ ರಜತ ಚಿತ್ರಫಲಕ ಪ್ರತಿಷ್ಠೆ ಜರಗಲಿದೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕ.ಸಾ.ಪ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಾಜಿ ಸಚಿವ ರಮಾನಾಥ ರೈ ಬಂಟ್ವಾಳ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಉದ್ಯಮಿಗಳಾದ ಕೆ.ಕೆ. ಶೆಟ್ಟಿ ಮುಂಡಪ್ಪಳ್ಳ, ರಘುರಾಮ ಶೆಟ್ಟಿ ಕುಳೂರು ಕನ್ಯಾನ ಭಾಗವಹಿಸುವರು.ಪಿ.ಆರ್. ಶೆಟ್ಟಿ ಪೊಯ್ಯೆಲು, ನಾರಾಯಣ ಹೆಗ್ಡೆ ಕೋಡಿಬೈಲು, ಶ್ರೀ ರಾಜ ಬೆಳ್ಳಪ್ಪಾಡ, ಚಂದ್ರಶೇಖರ ಜ್ಯೋತಿಷಿ, ಡಾ. ಸಂದೀಪ್ ಹೆಗ್ಡೆ ಕುಳೂರುಬೀಡು, ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರು, ಸೀತಾರಾಮ ಶೆಟ್ಟಿ ತಿಂಬರ, ಮೋಹನ ಹೆಗ್ಡೆ ಬೆಜ್ಜ, ಕೆ.ಆ‌ರ್. ಜಯಾನಂದ, ಶ್ರೀಧರ ಶೆಟ್ಟಿ, ಯೋಗೀಶ್ ರಾವ್ ಚಿಗುರುಪಾದೆ, ಕೃಷ್ಣಪ್ಪ ಪೂಜಾರಿ ದೇರಂಬಳ ಭಾಗವಹಿಸುವರು. ಬಳಿಕ ಪಾವಂಜೆ ಮೇಳದವರಿಂದ "ಶ್ರೀ ಹರಿ ಲೀಲಾಮೃತ" ಕಥಾ ಪ್ರಸಂಗದ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಲಿದೆ. 13 ರಂದು ಸೂರ್ಯೋದಯ ದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.