Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದೇ ಕ್ರಿಸ್ ಮಸ್ ಹಬ್ಬದ ಸಂದೇಶ. - ಶಿಲ್ಪಾ ದೇವಯ್ಯ ಐ.ಪಿ.ಎಸ್.

ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದೇ ಕ್ರಿಸ್ ಮಸ್ ಹಬ್ಬದ ಸಂದೇಶ. - ಶಿಲ್ಪಾ ದೇವಯ್ಯ ಐ.ಪಿ.ಎಸ್.
ಮಂಜೇಶ್ವರ: ‘ಏಸು ಕ್ರಿಸ್ತನ ಜನ್ಮದಿನದ ಸಂಕೇತವಾಗಿ ಕ್ರಿಸ್‍ಮಸ್ ಹಬ್ಬ ಆಚರಿಸಲಾಗುತ್ತದೆ. ಮನುಷ್ಯರಿಗೋಸ್ಕರ ದೇವರು ಪರ ಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದಂತಹ ಶುಭ ವರ್ತಮಾನ ತಿಳಿಸುವಂತಹದ್ದು. ದೇವರು ಮನುಷ್ಯರ ಮೇಲೆ ಎಷ್ಟು ಪ್ರೀತಿ ಇಟ್ಟಿದ್ದಾನೆ ಎಂಬುದನ್ನು ತೋರಿಸುವುದು ಈ ಕ್ರಿಸ್ ಮಸ್ ಹಬ್ಬದ ಉದ್ದೇಶ’ ಎಂದು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದೇವಯ್ಯ ಐ. ಪಿ.ಎಸ್ ನುಡಿದರು.
ಅವರು ಕ್ರಿಸ್ ಮಸ್ ಹಬ್ಬದಂಗವಾಗಿ ಸ್ನೇಹಾಲಯ ಅನಾಥಾಶ್ರಮ ಮಂಜೇಶ್ವರ ವತಿಯಿಂದ ಇಂದು ಸಂಜೆ ನಡೆದ ಕ್ರಿಸ್ಮಸ್ ಸ್ನೇಹ ಮಿಲನ - 2024 ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಬಳಿಕ ನೆರೆದ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಕ್ರಿಸ್‍ಮಸ್ ಹಬ್ಬ ಇಡೀ ಮನುಷ್ಯರನ್ನು ರಕ್ಷಣೆಯ ದಾರಿಯಲ್ಲಿ ನಡೆಸಲಿಕ್ಕೆ ಬಂದಂತಹ ಏಸುವಿನ ಆಗಮನವನ್ನು ಸೂಚಿಸುತ್ತದೆ. ಕ್ರಿಸ್‌ಮಸ್‌ ಶಾಂತಿ, ಸಮಾಧಾನದ ಹಬ್ಬ. ಶಾಂತಿ ಕಾಪಾಡುವುದೇ ಈ ಹಬ್ಬದ ಸಂದೇಶ ಎಂದವರು ನುಡಿದರು. ಹೊಸಂಗಡಿ ಇನ್ ಫೆಂಟ್ ಜೀಸಸ್ ಚರ್ಚ್ ನ ಫಾದರ್ ಲೂಯಿಸ್ ಮರಿಯದಾಸ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಮುಂಬಯಿ ಉದ್ಯಮಿ, ಕೊಡುಗೈ ದಾನಿ ಜೋಸೆಫ್ ಎಲಿಯಾಸ್ ಮೇನೇಜಸ್ ರನ್ನು ಸೇರಿದಂತೆ ಸ್ನೇಹಾಲಯದ ಸರ್ವತೋಮುಖ ಅಭಿವದ್ಧಿಗೆ ಸಹಕರಿಸಿದ ಹಲವಾರು ಮಂದಿ ದಾನಿಗಳನ್ನು ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ವಹಿಸಿದ್ದರು. ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸರ್ಜನ್ ಡಾ. ಶಿವಪ್ರಕಾಶ್ ಡಿ. ಎಸ್, ಯುವ ವಾಗ್ಮಿ ರಫೀಕ್ ಮಾಸ್ಟರ್, ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸ್ನೇಹಾಲಯದ ಸಂಸ್ಥಾಪಕರಾದ ಬ್ರದರ್ ಜೋಸೆಫ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ಖ್ಯಾತ ನಿರೂಪಕ ಜಿಯೋ ಡಿ' ಸಿಲ್ವಾ ನಿರೂಪಿಸಿ, ಸ್ನೇಹಾಲಯದ ಕಾರ್ಯದರ್ಶಿ ಕೊಲಿವೀಯ ಕ್ರಾಸ್ತಾ ವಂದಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಜಿ. ಜಿ. ಹಂಡ್ರೆಡ್ ಕೋರಸ್ ಟೀಮ್ ಮಂಗಳೂರು ಇವರಿಂದ ಸಂಗೀತ ರಸ ಮಂಜರಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.