ಅರಬ್ ದೇಶದ ಕನ್ನಡ ಸಂಘಟನೆಗಾರ ಡಾ. ಮೂಡಂಬೈಲು ರವಿ ಶೆಟ್ಟಿಯವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವತಿಯಿಂದ ಅದ್ದೂರಿ ಸನ್ಮಾನ.
ಡಿಸೆಂಬರ್ 21, 2024
0
ಅರಬ್ ದೇಶದ ಕನ್ನಡ ಸಂಘಟನೆಗಾರ ಡಾ. ಮೂಡಂಬೈಲು ರವಿ ಶೆಟ್ಟಿಯವರಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವತಿಯಿಂದ ಅದ್ದೂರಿ ಸನ್ಮಾನ.
ಕಾಸರಗೋಡು: ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಅರಬ್ ದೇಶದ ಕನ್ನಡ ಸಂಘಟನೆಗಾರರಾದ ಡಾ. ಮೂಡಂಬೈಲು ರವಿ ಶೆಟ್ಟಿಯವರನ್ನು ಅದ್ಧೂರಿಯಾಗಿ ಸನ್ಮಾನಿಸಲಾಯಿತು.ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ, ಆಂಧ್ರ ಪ್ರದೇಶ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್, ಶ್ರೀ ಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು, ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಸೇರಿದಂತೆ ಹಲವಾರು ಮಂದಿ ವೇದಿಕೆಯಲ್ಲಿ ಗಣ್ಯರು ಉಪಸ್ಥಿತರಿದ್ದು, ಸನ್ಮಾನಿಸಿದರು. ಅರಬ್ ದೇಶದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ, ಕನ್ನಡದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಕಲರವವನ್ನ ಪಸರಿಸಿದವರಾಗಿದ್ದಾರೆ. ಗಲ್ಪ್ ರಾಷ್ಟ್ರದಲ್ಲಿ ಇದ್ದುಕೊಂಡು ಸ್ವದೇಶದ ಅತೀ ಹೆಚ್ಚು ಜನತೆಗೆ ಉದ್ಯೋಗದಾತರಾಗುವ ಮೂಲಕ ತನ್ನ ಬಹುಮುಖಿ ಆಸಕ್ತಿ ಅಭಿರುಚಿಯಿಂದ ಕ್ರೀಡಾ, ಸಾಂಸ್ಕೃತಿಕ ಪ್ರೋತ್ಸಾಹಕರಾಗಿ ಗುರುತಿಸಿಕೊಂಡಿರುವ ಮಹಾನ್ ಸಾಧಕರಾಗಿದ್ದು, ಕತಾರ್ ದೇಶದ ಅನಿವಾಸಿ ಕನ್ನಡಿಗರಾಗಿರುವರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಡಂಬೈಲಿನ ತಿಮ್ಮಪ್ಪ ಶೆಟ್ಟಿ- ದೋಣಿಂಜೆಗುತ್ತು ಸರೋಜಿನಿ ಶೆಟ್ಟಿ ದಂಪತಿಗಳ ಪುತ್ರನಾದ ರವಿ ಶೆಟ್ಟಿ, ಪ್ರಸ್ತುತ ಕತಾರ್ ನಲ್ಲಿ ಕರ್ನಾಟಕ ಮೂಲದ ಕನ್ನಡ - ತುಳು ಸಂಘಟನೆಗಳಲ್ಲಿ ಅಪಾರ ಸೇವೆಗೈಯುತ್ತಾ, ಅಪಾಂಗ ವ್ಯಕ್ತಿಗಳಿಗೆ, ವೃದ್ಧಾಶ್ರಮಕ್ಕೆ ಸಹಾಯವನ್ನಾ ನೀಡುತ್ತಾ ಬಂದಿರುತ್ತಾರೆ. ಅಲ್ಲದೇ ಪುತ್ತೂರಿನಲ್ಲಿ ನೇಸರ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ ಹಲವಾರು ವ್ಯಕ್ತಿಗಳ ಬದುಕಿಗೆ ದಾರಿದೀಪವಾಗಿದ್ದು, ಇದೀಗ ಹಲವು ವರ್ಷಗಳಿಂದ ಕತಾರ್ ನಲ್ಲಿ ಉದ್ಯಮಿಯಾಗಿರುವರು.


