ಕ್ರಿಸ್ಮಸ್ ಅಂಗವಾಗಿ ನಾಳೆ ಸಂಜೆ ಮಂಜೇಶ್ವರ ಚರ್ಚ್ ನಲ್ಲಿ "ಕತೆನೇ ಬೇತೆ" ನಾಟಕ ಪ್ರದರ್ಶನ.
ಡಿಸೆಂಬರ್ 24, 2024
0
ಕ್ರಿಸ್ಮಸ್ ಅಂಗವಾಗಿ ನಾಳೆ ಸಂಜೆ ಮಂಜೇಶ್ವರ ಚರ್ಚ್ ನಲ್ಲಿ "ಕತೆನೇ ಬೇತೆ" ನಾಟಕ ಪ್ರದರ್ಶನ.
ಮಂಜೇಶ್ವರ: ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ನಾಳೆ (ಡಿಸೆಂಬರ್ 25 ರಂದು ಬುಧವಾರ) ಸಂಜೆ 6.30 ಕ್ಕೆ ಇಗರ್ಜಿಯ ವಠಾರದಲ್ಲಿ ಇಗರ್ಜಿಯ ಕಲಾವಿದರಿಂದ "ಕತೆನೇ ಬೇತೆ" ಎಂಬ ತುಳು ಹಾಸ್ಯ ಮಿಶ್ರಿತ ಕೌಟುಂಬಿಕ ನಾಟಕ ಪ್ರದರ್ಶನಗೊಳ್ಳಲಿದೆ. ಎಂದು ಇಗರ್ಜಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಗರ್ಜಿಯ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವರ ಕಲೆಗೆ ಬೆಲೆ ನೀಡಲು ವೇದಿಕೆ ಸಿದ್ಧಪಡಿಸಿದ್ದಾರೆ. ಶ್ರೀ ಎ.ಕೆ.ವಿ ಬೇಂಡೆಲ್ ತಮ್ಮ ಚೊಚ್ಚಲ ಕೃತಿಯಿಂದ ಕಥೆ, ಸಂಭಾಷಣೆ ರಚಿಸಿ, ನಿರ್ದೇಶನವನ್ನು ಕೂಡಾ ಮಾಡಲಿದ್ದು, ಉಪ್ಪಿನಂಗಡಿ ಇಂಚರ ಮ್ಯೂಸಿಕ್ ನ ಬಿ.ಎಸ್.ಕಾರಂತ್ ಸುಮಧುರ ಸಂಗೀತ ನೀಡಲಿರುವರು. ಶ್ರೀ ಸೋಮನಾಥ್ ಆರ್ಟ್ಸ್, ಉಚ್ಚಿಲ ಪರದೆ, ಮೇಕಪ್ ಪ್ರಸಾದನದಲ್ಲಿ ಹಾಗೂ ಸ್ನೇಹ ಸೌಂಡ್ಸ್ & ಲೈಟ್ಸ್ ತೊಕ್ಕೋಟ್ಟು ಧ್ವನಿ ಮತ್ತು ಬೆಳಕಿನಲ್ಲಿ
ಸಹಕರಿಸಲಿರುವರು. ರಂಗ ಕಲಾವಿದರಾಗಿ ಡೆವಿನ್ ವೇಗಸ್, ಬೇಬಿ ಎಲ್ಲಿಯಾ ಮೊಂತೇರೊ, ಹೆರಾಲ್ಡ್ ಡಿಸೋಜ, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವೀನಾ ಮೊಂತೇರೊ, ರೋಶನ್ ಮಾರ್ಟಿನ್, ರೀನಾ ಮೊಂತೇರೊ, ಅಡ್ಲಿನ್ ಡಿಸೋಜ, ರೆಮಿ ಡಿಸೋಜ, ಜಯಶ್ರೀ ಮೊಂತೇರೊ, ಪ್ರವೀಣ್ ಡಿಸೋಜ, ರಾಜೇಶ್ ವೇಗಸ್, ರಾಜೇಶ್ ಡಿ' ಸೋಜ, ಸಾಮಾಜಿಕ ಮುಂದಾಳು ನವೀನ್ ಮೊಂತೇರೊ ಮಂಜೇಶ್ವರ, ಡೆಲ್ಸನ್ ಮೀಡಿಯದ ಸಂಸ್ಥಾಪಕ ಡೆರಿಕ್ ಮೊಂತೇರೊ, ರೋಹನ್ ಡಿ'ಸೋಜ, ಸೊನಿಶಾ ಮೊಂತೇರೊ, ಫೆಡ್ರಿಕ್ ಡಿಸೋಜ ಅಭಿನಯಿಸಲಿರುವರು. ಪ್ರವೇಶವು ಉಚಿತವಾಗಿದ್ದು, ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ್ದಲ್ಲಿ ವೇದಿಕೆ ಮುಂಭಾಗದ ಆಸನ ಲಭ್ಯವಾಗಲಿದೆ. ಎಲ್ಲಾ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ವೀಕ್ಷಿಸಿ, ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕಾಗಿ ಇಗರ್ಜಿಯ ಕಲಾವಿದರು ವಿನಂತಿಸಿದ್ದಾರೆ.



