ಎಡನೀರು ಶ್ರೀಗಳು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳ ಆಕ್ರಮಣ. ಕೇರಳ ಸರಕಾರ ಕೂಡಲೇ ಆರೋಪಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಕಬೈಲು ಮಂಜುನಾಥ ಅಡಪ ಆಗ್ರಹ.
ನವೆಂಬರ್ 07, 2024
0
ಎಡನೀರು ಶ್ರೀಗಳು ಸಂಚರಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳ ಆಕ್ರಮಣ. ಕೇರಳ ಸರಕಾರ ಕೂಡಲೇ ಆರೋಪಿಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಕಬೈಲು ಮಂಜುನಾಥ ಅಡಪ ಆಗ್ರಹ.
ಬೆಂಗಳೂರು: ಸಪ್ತ ಭಾಷ ಸಂಗಮ ಭೂಮಿಯಾದ ಕಾಸರಗೋಡಿನಲ್ಲಿ ಎಡನೀರು ಸ್ವಾಮೀಜಿಗಳ ಕಾರಿನ ಮೇಲೆ ದುಷ್ಕರ್ಮಿಗಳ ದಾಳಿಯಾಗಿದ್ದು ಇದು ದೊಡ್ಡ ದುರಂತವಾಗಿದೆ. ತಪ್ಪಿತಸ್ಥ ಆರೋಪಿಯನ್ನು ಪೊಲೀಸರು ಬಂಧಿಸ ಪೊಲೀಸರು ಬಂಧಿಸಬೇಕು. ಅವರ ವಿಚಾರಣೆಯಾಗಬೇಕು ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಸೃಷ್ಟಿ ಕಲಾಭೂಮಿ ಬೆಂಗಳೂರು - ಕಾಸರಗೋಡು ಘಟಕದ ಸಂಸ್ಥಾಪಕರಾದ ಸಂಕಬೈಲು ಮಂಜುನಾಥ ಅಡಪರವರು ಆಗ್ರಹಿಸಿದ್ದಾರೆ. ಹಿಂದುಸ್ಥಾನದಲ್ಲಿ ಹಿಂದುಗಳೇ ಸಾರ್ವಭೌಮರು. ಇವತ್ತು ನಾವು ಕೇರಳ ಸರ್ಕಾರದಿಂದ ರಕ್ಷಣೆಗೆ ಬೇಡಿಕೆ ಇಟ್ಟಿರೋದು ಬೇಸರದ ಸಂಗತಿ. ಇವತ್ತು ಸ್ವಾಮೀಜಿಗಳ ಮೇಲೆ ಹಲ್ಲೆಯಾಗಿದೆ ಇದಕ್ಕೆ ಉತ್ತರ ಕೊಡುವ ಕಾಲ ಶೀಘ್ರವೇ ಬರಲಿದೆ ಅದಕ್ಕೆ ನಾವು ಸರಕಾರವನ್ನು ಆಗ್ರಹಿಸುತ್ತಿದ್ದೇವೆ ಆದಷ್ಟು ಬೇಗ ಆರೋಪಿಗಳನ್ನು ಹಿಡಿದು ಶಿಕ್ಷಿಸಬೇಕೆಂದು ಕೇರಳದ ಮುಖ್ಯಮಂತ್ರಿಯನ್ನು ಒತ್ತಾಯಿಸ್ತಿದ್ದೇವೆ.
ಕೇರಳದ ಮುಖ್ಯಮಂತ್ರಿ ಅವರು ಈ ಘಟನೆಯನ್ನು ಗಮನಕ್ಕೆ ತರಬೇಕು ಅವರು ಕೂಡ ಸ್ವಾಮೀಜಿ ಮೇಲೆ ಆದ ಹಲ್ಲೆಯನ್ನು ಖಂಡಿಸಬೇಕೆಂದು ಎಂದು ಅವರು ತಮ್ಮ ಖಂಡನೆಯಲ್ಲಿ ವ್ಯಕ್ತಪಡಿಸಿದ್ದಾರೆ.

