Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪಾರಂಪರಿಕ ಶೈಲಿಯ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ, KIOCL ನ ನಿವೃತ್ತ ಉದ್ಯೋಗಿ, ಹವ್ಯಾಸೀ ಯಕ್ಷಗಾನ ಕಲಾವಿದ ಶ್ರೀ ಯೋಗೀಶ ತುಂಗ (65) ನಿಧನ.

ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದ ಪಾರಂಪರಿಕ ಶೈಲಿಯ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ, KIOCL ನ ನಿವೃತ್ತ ಉದ್ಯೋಗಿ, ಹವ್ಯಾಸೀ ಯಕ್ಷಗಾನ ಕಲಾವಿದ ಶ್ರೀ ಯೋಗೀಶ ತುಂಗ (65) ನಿಧನ.
ಮಂಜೇಶ್ವರ: ಕೋಳ್ಯೂರು ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಸಂದರ್ಭಗಳಲ್ಲಿ ಪಾರಂಪರಿಕ ಶೈಲಿಯ ಬ್ರಹ್ಮ ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ, KIOCL ನ ನಿವೃತ್ತ ಉದ್ಯೋಗಿ, ಹವ್ಯಾಸೀ ಯಕ್ಷಗಾನ ಕಲಾವಿದ ಶ್ರೀ ಯೋಗೀಶ ತುಂಗ (65) ದೀರ್ಘ ಕಾಲದ ಅನಾರೋಗ್ಯದಿಂದ ನಿಧನರಾದರು. ಮೃತರು ದಿ. ಸುಬ್ರಾಯ ತುಂಗ - ದಿ. ಪದ್ಮಾವತಿ ದಂಪತಿಗಳ ಪುತ್ರನಾಗಿದ್ದು, ಕೋಳ್ಯೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಪಾರಂಪರಿಕ ಬ್ರಹ್ಮ ವಾಹಕರಾಗಿದ್ದ ತನ್ನ ತಂದೆಯ ಸೇವಾ ಕಾರ್ಯವನ್ನು ಇದುವರೆಗೆ ಮುಂದುವರೆಸಿಕೊಂಡು ಬಂದಿದ್ದರು. ಮೂಲತಃ ಮಂಗಳೂರಿನ ಕಾವೂರಿನಲ್ಲಿ ವಾಸಿಸುತ್ತಿದ್ದ ಯೋಗೀಶ್ ತುಂಗರವರು ಧರ್ಮಪತ್ನಿ ಉಮಾದೇವಿಯವರು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಿಧನರಾದ ಬಳಿಕ ಶ್ರೀ ಕೋಳ್ಯೂರು ಶಂಕರನಾರಾಯಣ ದೇವಸ್ಥಾನದ ಬಳಿ ಇರುವ ತನ್ನ ಸಹೋದರನ ಮನೆಯಲ್ಲಿ ವಾಸಿಸುತ್ತಿದ್ದರು. ಮೃತರಿಗೆ ಮಕ್ಕಳು ಇಲ್ಲ. ಮೃತರು ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮನೆ ಹಿತ್ತಲಿನಲ್ಲಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.