ಪುತ್ತೂರುದ ಪಿಲಿಗೊಬ್ಬು - 2 ಸ್ಪರ್ಧೆಯಲ್ಲಿ ತೃತೀಯ ಬಹುಮಾನ ತೂಮಿನಾಡು ಶ್ರೀ ಮಹಾಕಾಳಿ ಟೈಗರ್ಸ್ ತಂಡಕ್ಕೆ.
ಅಕ್ಟೋಬರ್ 07, 2024
0
ಪುತ್ತೂರುದ ಪಿಲಿಗೊಬ್ಬು - 2 ಸ್ಪರ್ಧೆಯಲ್ಲಿ
ತೃತೀಯ ಬಹುಮಾನ ತೂಮಿನಾಡು ಶ್ರೀ ಮಹಾಕಾಳಿ ಟೈಗರ್ಸ್ ತಂಡಕ್ಕೆ.
ಮಂಜೇಶ್ವರ: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ ನಿನ್ನೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ನಡೆದ ಪುತ್ತೂರುದ ಪಿಲಿಗೊಬ್ಬು - 2 ಕಾರ್ಯಕ್ರಮದಲ್ಲಿ ತೃತೀಯ ಬಹುಮಾನವನ್ನು ಶ್ರೀ ಮಹಾಕಾಳಿ ಟೈಗರ್ಸ್ ತೂಮಿನಾಡು ಗೆದ್ದುಕೊಂಡಿದೆ. ಆ ಮೂಲಕ ಮಂಜೇಶ್ವರದ ಹೆಸರಿಗೆ ಕೀರ್ತಿ ತಂದು ಕೊಟ್ಟಿದ್ದಾರೆ. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್, ದ್ವಿತೀಯ ಬಹುಮಾನವನ್ನು ಸ್ವಾಮಿ ಕೊರಗಜ್ಜ ಭಕ್ತ ವೃಂದ ಕುಂಪಲ ಪಡೆದುಕೊಂಡಿದೆ.

