Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

67 ನೇ ವರ್ಷದ ಮಂಜೇಶ್ವರದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದಂಗವಾಗಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಹಾಗೂ ಪ್ರಾಣ ಪ್ರತಿಷ್ಠೆ.

67 ನೇ ವರ್ಷದ ಮಂಜೇಶ್ವರದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದಂಗವಾಗಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಹಾಗೂ ಪ್ರಾಣ ಪ್ರತಿಷ್ಠೆ.
ಮಂಜೇಶ್ವರ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದ ವಿಭುದೇಂದ್ರ ಸಭಾಂಗಣದಲ್ಲಿ 67 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದಂಗವಾಗಿ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ ಹಾಗೂ
ಪ್ರಾಣ ಪ್ರತಿಷ್ಠೆ ಪೂಜೆ ಕಾರ್ಯಕ್ರಮ ಅರ್ಚಕರಾದ ಪುರುಷೋತ್ತಮ್ ಆಚಾರ್ಯ ಹಾಗೂ ರವಿದಾಸ್ ಭಟ್ ರ ನೇತೃತ್ವದಲ್ಲಿ ನಡೆಯುವುದರೊಂದಿಗೆ ಮಂಜೇಶ್ವರದ ಶಾರದಾ ಮಹೋತ್ಸವಕ್ಕೆ ವೈಭವದ ಚಾಲನೆ ದೊರೆಯಿತು. ಈ ವೇಳೆ ಸಮಿತಿಯ ಅಧ್ಯಕ್ಷ ಲಿಖಿತ್ ಶಿವಾಜಿ ಪ್ರಭು, ಪ್ರಧಾನ ಕಾರ್ಯದರ್ಶಿ: ಜಿ. ನರಸಿಂಹ ಪ್ರಭು, ಕೋಶಾಧಿಕಾರಿ ಎಂ. ದಿನೇಶ್ ಶೆಣೈ, ಶೋಭಾಯಾತ್ರೆ ಪ್ರಮುಖ ಪ್ರಸಾದ್ ಪ್ರಭು, ಸೇರಿದಂತೆ ದೇವಸ್ಥಾನದ ಆಡಳಿತ ಮಂಡಳಿ, ಮಂಜೇಶ್ವರ ಕಾರ್ ಸ್ಟ್ರೀಟ್ ಫ್ರೆಂಡ್ಸ್ ನ ಪದಾಧಿಕಾರಿಗಳು, ಸದಸ್ಯರು, ಭಕ್ತ ಮಹಾಶಯರು ಉಪಸ್ಥಿತರಿದ್ದರು. ಈ ವರ್ಷದ 67 ನೇ ಮಂಜೇಶ್ವರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು 13 ರ ತನಕ ವಿವಿಧ ವೈದಿಕ, ಧಾರ್ಮಿಕ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿದೆ. ಅಲ್ಲದೆ ಈ ಬಾರಿ ವಿಶೇಷವಾಗಿ ನೂತನ ಬೆಳ್ಳಿಯ ನವಿಲನ್ನು ದೇವಿಗೆ ಸಮರ್ಪಿಸಲು ಸಮಿತಿ ತೀರ್ಮಾನಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.