Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾರಡ್ಕದಲ್ಲಿ ಸ್ಪೋರ್ಟ್ಸ್ ಶಾಲೆ ಸ್ಥಾಪನೆಯಾಗಬೇಕು: ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಒಕ್ಕೊರಲ ಒತ್ತಾಯ.

ಕಾರಡ್ಕದಲ್ಲಿ ಸ್ಪೋರ್ಟ್ಸ್ ಶಾಲೆ ಸ್ಥಾಪನೆಯಾಗಬೇಕು: ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆ ಒಕ್ಕೊರಲ ಒತ್ತಾಯ.
ಕಾರಡ್ಕ: ಗ್ರಾಮೀಣ ಪ್ರದೇಶವಾದ ಕಾರಡ್ಕದಲ್ಲಿ ಅನೇಕ ಪ್ರತಿಭಾನ್ವಿತರು ಅವಕಾಶ ವಂಚಿತರಾಗುತ್ತಿದ್ದಾರೆ. ಸಾಕಷ್ಟು ಸ್ಥಳಾವಕಾಶ ಇದೆ. ಇಲ್ಲಿ ಒಂದು ಸ್ಪೋರ್ಟ್ಸ್ ಶಾಲೆ ಸ್ಥಾಪನೆಯಾಗಬೇಕು ಎಂದು ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಒಕ್ಕೊರಲಿನಿಂದ ಒತ್ತಾಯಿಸಿದೆ. ಭಾಷಾ ಅಲ್ಪಸಂಖ್ಯಾಕ ಪ್ರದೇಶವಾಗಿರುವ ಕಾಸರಗೋಡಿನ ಮಂದಿಗೆ ಇದೊಂದು ಅಗತ್ಯವೂ ಹೌದು ಎಂದು ಸಭೆಯು ಅಭಿಪ್ರಾಯಪಟ್ಟಿತು. ಶತಮಾನದ ಹಿರಿಮೆಯುಳ್ಳ ಕಾರಡ್ಕ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಕುಮಾರ್ ಕೆ, ಉಪಾಧ್ಯಕ್ಷರಾಗಿ ಬಶೀರ್ ಬಿ, ಮಾತೃ ಸಮಿತಿ ಅಧ್ಯಕ್ಷರಾಗಿ ರಂಜಿನಿ, ಎಸ್ ಎಂ ಸಿ ಅಧ್ಯಕ್ಷರಾಗಿ ಸುರೇಶ್ ಮೂಡಾಂಕುಳ ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.