ಸಮಗ್ರ ಶಿಕ್ಷಾ ಕೇರಳ, ಬಿ.ಆರ್.ಸಿ ಮಂಜೇಶ್ವರ ಆಶ್ರಯದಲ್ಲಿ ಜಿ.ಹೆಚ್.ಎಸ್ ಕಡಂಬಾರ್ ಶಾಲೆಯಲ್ಲಿ "ಲೈಫ್ - 24 ಶಿಬಿರ".
ಸೆಪ್ಟೆಂಬರ್ 28, 2024
0
ಸಮಗ್ರ ಶಿಕ್ಷಾ ಕೇರಳ, ಬಿ.ಆರ್.ಸಿ ಮಂಜೇಶ್ವರ ಆಶ್ರಯದಲ್ಲಿ ಜಿ.ಹೆಚ್.ಎಸ್ ಕಡಂಬಾರ್ ಶಾಲೆಯಲ್ಲಿ "ಲೈಫ್ - 24 ಶಿಬಿರ".
ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ, ಬಿ.ಆರ್.ಸಿ ಮಂಜೇಶ್ವರ ಇದರ ಆಶ್ರಯದಲ್ಲಿ ಜಿ.ಹೆಚ್.ಎಸ್ ಕಡಂಬಾರ್ ಶಾಲೆಯಲ್ಲಿ ಲೈಫ್ - 24 ಶಿಬಿರವು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಕಮಲಾಕ್ಷಿ ಇವರಿಂದ ಉದ್ಘಾಟನೆಗೊಂಡಿತು .ಶಾಲಾ ಪಿ.ಟಿ.ಎ ಅಧ್ಯಕ್ಷ ಮೊಯಿದೀನ್ ಕುಂಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಗಳಾದ ದಿನೇಶ್. ವಿ, ಮಂಜೇಶ್ವರ ಉಪ ಜಿಲ್ಲಾ ವಿದ್ಯಾಧಿಕಾರಿಗಳಾದ ರಾಜಗೋಪಾಲ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುನಿತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಂಜೆಶ್ವರ ಬಿ ಆರ್ ಸಿ ಯ ಬಿ.ಪಿ.ಸಿ ಯವರಾದ ಜೋಯ್ ಜಿ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ಪೆಷಲಿಸ್ಟ್ ಅಧ್ಯಾಪಕರಾದ ಪ್ರಕಾಶ್ ಧನ್ಯವಾದವನ್ನಿತ್ತರು. ತದನಂತರ ಮಕ್ಕಳಿಗೆ ವಿವಿಧ ಆಟಗಳು, ಚಟುವಟಿಕೆಗಳು ನಡೆದವು. ಮೂರು ದಿನಗಳ ಕಾಲ ನಡೆಯಲಿರುವ ಈ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯಗಳಾದ ಅಡುಗೆ, ಕೃಷಿ, ಪ್ಲಂಬಿಂಗ್ ನ್ನು ತಿಳಿಸಿಕೊಡುವ ಉದ್ದೇಶವನ್ನು ಹಮ್ಮಿಕೊಂಡಿದ್ದು ಮೊದಲನೇ ದಿನದಲ್ಲಿ ಅಡುಗೆಗೆ ಸಂಬಂದಿಸಿ "ಪುಟ್ಟು" ತಯಾರಿಕೆಯ ಪ್ರಾತ್ಯಕ್ಷಿಕೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸ್ಪೆಷಲಿಸ್ಟ್ ಅದ್ಯಾಪಕರಾದ ಪ್ರಕಾಶ್, ಮಿದುಲ, ಸಿ.ಆರ್.ಸಿ ಕೋ ಆರ್ಡಿನೇಟರ್ ಶ್ರೀಮತಿ ದಿವ್ಯಾ, ಹಾಗೂ ಸಿ.ಆರ್.ಸಿ.ಕೋರ್ಡಿನೇಟರ್ ಶನಾರಾಯಣ ರಾಜ್, ಶ್ರೀಮತಿ ಮೋಹಿನಿ ಸಹಕರಿಸಿದರು.






