ಐಲ ಶಿವಾಜಿನಗರದಲ್ಲಿ ತೀರ್ಥ ಸ್ನಾನ ಸೆ.3ರಂದು.
ಆಗಸ್ಟ್ 31, 2024
0
ಐಲ ಶಿವಾಜಿನಗರದಲ್ಲಿ ತೀರ್ಥ ಸ್ನಾನ ಸೆ.3 ರಂದು.
ಉಪ್ಪಳ: ತೀರ್ಥ ಅಮಾವಾಸ್ಯೆಯ ಪ್ರಯುಕ್ತ 3-9-2024 ರಂದು ಐಲ ಶಿವಾಜಿನಗರದಲ್ಲಿ ತೀರ್ಥ ಸ್ನಾನ ಕಾರ್ಯಕ್ರಮ ನಡೆಯಲಿದೆ. ಶ್ರೀ ಗಣೇಶೋತ್ಸವ, ಶ್ರೀ ಶಾರದೋತ್ಸವ ವಿಸರ್ಜನಾ ಸ್ವಾಗತ ಸಮಿತಿ ಶಿವಾಜಿನಗರ ಐಲ ಕಡಪ್ಪರ ಹಾಗೂ ಶಿವಾಜಿ ಫ್ರೆಂಡ್ಸ್ ಶಿವಾಜಿ ನಗರ ಐಲ ಕಡಪ್ಪರ ಇದರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಮುಂಜಾನೆಯಿಂದ ತೀರ್ಥ ಸ್ನಾನ ಆರಂಭಗೊಂಡು ಮಧ್ಯಾಹ್ನ ತನಕ ನಡೆಯಲಿದೆ. ಸಮಿತಿ ಹಾಗೂ ಕ್ಲಬ್ ವತಿಯಿಂದ ತಳಿರು ತೋರಣ, ಮಹಿಳೆಯರಿಗಾಗಿ ಬಟ್ಟೆ ಬದಲಿಸಲು ಪ್ರತ್ಯೇಕ ಕೊಠಡಿ, ಕಾರ್ಯಕರ್ತರಿಂದ ರಕ್ಷಣೆಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

