Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಧಾರ್ಮಿಕ ಮುಂದಾಳು, ತುಳುವರ ನೇತಾರ ದಾಮೋದರ ನಿಸರ್ಗ (75) ವಿಧಿವಶ.

ಧಾರ್ಮಿಕ ಮುಂದಾಳು, ತುಳುವರ ನೇತಾರ ದಾಮೋದರ ನಿಸರ್ಗ (75) ವಿಧಿವಶ.
ಮಂಗಳೂರು: ಕಳೆದ 10 ದಶಕಗಳಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು ಕನ್ನಡ ಸಾಹಿತ್ಯ ಸಂಘಟನೆಗಳನ್ನು ನಡೆಸಿ ಎಷ್ಟು ಸಮ್ಮೇಳನಗಳನ್ನು ಸಂಯೋಜಿಸಿದ ಅನುಭವಿ ಸಂಘಟನಾ ಕ್ಷೇತ್ರದ ದಿಗ್ಗಜ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಚಲನ ಮೂಡಿಸಿದ ತುಳುಕೂಟದ ಅಧ್ಯಕ್ಷರಾಗಿ ಹಲವಾರು ವರ್ಷಗಳಿಂದ ತುಳು ಸಾಹಿತ್ಯ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದ ಶ್ರೀ ಬಿ. ದಾಮೋದರ ನಿಸರ್ಗ (75) ಇವರು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕರ್ನಾಟಕ ರಾಜ್ಯದ ಹೆಸರಾಂತ ಕಾದಂಬರಿ ಕಾರ ಚಲನಚಿತ್ರ ನಿರ್ದೇಶಕರಾದ ವಿಶುಕುಮಾರ್ ಇವರ ಸಹೋದರರಾದ ದಾಮೋದರ ನಿಸರ್ಗ ಇವರು 11.08. 1949ರಲ್ಲಿ ಮಂಗಳೂರು ಮರೋಳಿಯ ನಿಸರ್ಗ ಮನೆಯಲ್ಲಿ ಯಕ್ಷಗಾನ ಕ್ಷೇತ್ರದ ದಿಗ್ಗಜ ಶ್ರೀ ದೋಗ್ರ ಪೂಜಾರಿ ಮತ್ತು ಚಂದ್ರಾವತಿ ಇವರ ಮಗನಾಗಿ ಜನಿಸಿದರು. ಮಡದಿ ಹೇಮಾ ನಿಸರ್ಗ, ಮಗಳು ಡಾಕ್ಟರ್ ವಿನ್ಯಾಸ ನಿಸರ್ಗ, ಅಳಿಯ ಡಾಕ್ಟರ್ ವಿನಯ್ ಜತ್ತನ್ ಮತ್ತು ಮಗ ತ್ರಿದೇವ್ ನಿಸರ್ಗ ಇವರೊಂದಿಗೆ ಕೂಡು ಕುಟುಂಬದ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಸಾಹಿತ್ಯ ಸಂಘಟನೆಯ ಪ್ರವೃತ್ತಿಯೊಂದಿಗೆ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದ ದಾಮೋದರ ನಿಸರ್ಗ ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮೊಕ್ತೆಸರರಾಗಿ ,ಗೋಕರ್ಣನಾಥ ಬ್ಯಾಂಕಿನ ಅಧ್ಯಕ್ಷರಾಗಿ, ಕಂಕನಾಡಿ ಗರಡಿಯ ಆಡಳಿತ ಮಂಡಳಿಯ ಸದಸ್ಯರಾಗಿ , ಕಂಕನಾಡಿ ಬಿಲ್ಲವ ಸಂಘದ ಸ್ಥಾಪಕ ಅಧ್ಯಕ್ಷರಾಗಿ ,ಕುಡ್ಲ ತುಳುಕೂಟದ ಅಧ್ಯಕ್ಷರಾಗಿ, ತುಳು ಒಕ್ಕೂಟದ ಕಾರ್ಯಾಧ್ಯಕ್ಷರಾಗಿ, ಎ ಸ್‌.ಸಿ.ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿ ,ದೋಗ್ರ ಪೂಜಾರಿ ಯಕ್ಷಗಾನ ಕೇಂದ್ರದ ಸ್ಥಾಪಕ ಅಧ್ಯಕ್ಷರಾಗಿ, ದೋಗ್ರ ಪೂಜಾರಿ ಯಕ್ಷಗಾನ ಪ್ರಶಸ್ತಿಯ ಸ್ಥಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ,ಸಂಘ-ಸಂಸ್ಥೆಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ, ತನ್ನನ್ನು ತೊಡಗಿಸಿ ಕೊಂಡವರು ,ಎಷ್ಟೋ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದವರು ಅವರ ಅಗಲಿಕೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ತುಳು ಕನ್ನಡ ಸಾಹಿತ್ಯ ಸಂಘಟನಾ ಕ್ಷೇತ್ರಕ್ಕೆ ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ. ಬಿ ದಾಮೋದರ ನಿಸರ್ಗ ಇವರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು ನಿಸರ್ಗ ಮರೋಲಿ ಅವರ ಸ್ವಗ್ರಹದಿಂದ ಮೆರವಣಿಗೆಯಲ್ಲಿ ಬಂದು ಕಂಕನಾಡಿ ಗರಡಿಯ ಮುಂಭಾಗದಲ್ಲಿ 11 ಗಂಟೆಯಿಂದ 12 ಗಂಟೆಯವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬದ ಪ್ರಕಟಣೆ ತಿಳಿಸಿದೆ. ನಿಸರ್ಗರ ಅಭಿಮಾನಿಗಳು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಬೇಕೆಂದು ಕುಟುಂಬಸ್ಥರು ವಿನಂತಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.