ಮುಳ್ಳೇರಿಯ ಇನ್ನೇಂಟ್ ಜೀಸಸ್ ಚರ್ಚ್ ಫಾದರ್ ಕುದಿಲಿಲ್ ಮ್ಯಾಥ್ಯು ಧ್ವಜವರೋಹಣ ವೇಳೆ ವಿದ್ಯುತ್ ಶಾಕ್ ತಗುಲಿ ಮೃತ್ಯು.
ಆಗಸ್ಟ್ 15, 2024
0
ಮುಳ್ಳೇರಿಯ ಇನ್ನೇಂಟ್ ಜೀಸಸ್ ಚರ್ಚ್ ಫಾದರ್ ಕುದಿಲಿಲ್ ಮ್ಯಾಥ್ಯು ಧ್ವಜವರೋಹಣ ವೇಳೆ ವಿದ್ಯುತ್ ಶಾಕ್ ತಗುಲಿ ಮೃತ್ಯು.
ಮುಳ್ಳೇರಿಯ: ಮುಳ್ಳೇರಿಯ ಇನ್ನೇಂಟ್ ಜೀಸಸ್ ಚರ್ಚ್ ಫಾದರ್ ಕುದಿಲಿಲ್ ಮ್ಯಾಥ್ಯು ರವರು ನಿನ್ನೆ ಸಂಜೆ ಧ್ವಜವರೋಹಣ ಮಾಡುತ್ತಿರುವ ವೇಳೆ ಧ್ವಜ ಸ್ತಂಭಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ, ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ಸಂಭವಿಸಿದೆ. ಚರ್ಚ್ ಆವರಣದಲ್ಲಿ ಬೆಳಗ್ಗೆ ಸ್ವಾತಂತ್ರ್ಯ ದಿನಾಚರಣೆ ನಡೆದಿತ್ತು. ಸಂಜೆ ವೇಳೆಗೆ ಧ್ವಜವನ್ನು ಅವರೋಹಣ ಮಾಡುತ್ತಿದ್ದಾಗ ಧ್ವಜ ಸ್ತಂಭದ ಕಬ್ಬಿಣದ ಕಂಬ ವಾಲಿದ್ದು, ವಿದ್ಯುತ್ ತಂತಿಗೆ ಬಿದ್ದಿದೆ. ಇದರಿಂದಾಗಿ ತ್ರಿವರ್ಣ ಧ್ವಜವನ್ನು ಮಡಚಿ ಕಟ್ಟುತ್ತಿದ್ದ ಫಾದರ್ ಮೇಲೆ ವಿದ್ಯುತ್ ಶಾಕ್ ತಗಲಿದ್ದು, ಸ್ಥಳದಲ್ಲೇ ಸಾವು ಕಂಡಿದ್ದಾರೆ. ಫಾದರ್ ಜೊತೆಗಿದ್ದವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕೂಡಲೇ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಫಾದರ್ ಕುದೀಲಿಲ್ ಮ್ಯಾಥ್ಯ ಅವರು ತಮ್ಮ ಸರಳ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದರು.

