ತೊಕ್ಕೊಟ್ಟು ಕಾಪಿಕಾಡ್ ನಿವಾಸಿ, ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಗಿ ನಿವೃತ್ತರಾದ ಜನಾರ್ಧನ ಆಚಾರ್ಯ (72) ನಿಧನ.
ಆಗಸ್ಟ್ 29, 2024
0
ತೊಕ್ಕೊಟ್ಟು ಕಾಪಿಕಾಡ್ ನಿವಾಸಿ, ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಗಿ ನಿವೃತ್ತರಾದ ಜನಾರ್ಧನ ಆಚಾರ್ಯ (72) ನಿಧನ.
ತೊಕ್ಕೊಟ್ಟು: ಮೂಲತಃ ಮಂಜೇಶ್ವರ ಉದ್ಯಾವರ ನಿವಾಸಿ ಇದೀಗ ತೊಕ್ಕೊಟ್ಟುವಿನ ಕಾಪಿಕಾಡ್ ನ
ಕ್ಷಿತಿಜ ನಿವಾಸದಲ್ಲಿ ವಾಸಿಸುತ್ತಿರುವ ಜನಾರ್ಧನ ಆಚಾರ್ಯ (72) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 6.30 ಗೆ ಚೆಂಬುಗುಡ್ಡೆಯ ಸ್ಮಶಾನದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಉದ್ಯಾವರ ನಿವಾಸಿ ದಿ. ಸುಂದರ ಆಚಾರ್ಯ - ದಿ. ಸರಸ್ವತೀ ದಂಪತಿಗಳ ಪುತ್ರರಾಗಿರುವ ಜನಾರ್ಧನ ಆಚಾರ್ಯರು ಕರ್ನಾಟಕ ವಿದ್ಯುತ್ ನಿಗಮದಲ್ಲಿ ಸಹಾಯಕ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ, ವಿಶ್ರಾಂತ ಜೀವನ ಸಾಗಿಸುತ್ತಿದ್ದರು. ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ: ಗಾಯತ್ರಿ, ಮಕ್ಕಳಾದ ಕವನ್, ಕೃತಿ, ಅಳಿಯ: ರವಿ ಬೆಂಗಳೂರು, ಸಹೋದರ - ಸಹೋದರಿಯರಾದ ಜಯಂತಿ ಮುಂಬೈ, ಚಂದ್ರಾವತಿ ಮಂಗಳೂರು, ಉದ್ಯಾವರ ರವೀಂದ್ರ ಆಚಾರ್ಯ, ಭಾನುಮತಿ ಬೆಂಗಳೂರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

