ಕಾಸರಗೋಡು ಶ್ರೀ ಗುರುರಾಘವೇಂದ್ರ ಸ್ವಾಮೀ ಬೃಂದಾವನದಲ್ಲಿ ಶ್ರೀ ಗುರು ರಾಯರ 353 ನೇ ಆರಾಧನಾ ಮಹೋತ್ಸವ.
ಆಗಸ್ಟ್ 21, 2024
0
ಕಾಸರಗೋಡು ಶ್ರೀ ಗುರುರಾಘವೇಂದ್ರ ಸ್ವಾಮೀ ಬೃಂದಾವನದಲ್ಲಿ ಶ್ರೀ ಗುರು ರಾಯರ 353 ನೇ ಆರಾಧನಾ ಮಹೋತ್ಸವ.
ಕಾಸರಗೋಡು: ನಗರದ ಎಸ್. ವಿ. ಟಿ. ರಸ್ತೆಯಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮೀ ಬೃಂದಾವನ ಸೇವಾ ಸಮಿತಿಯ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ಇಂದು ನಡೆಯಿತು. ರಾಯರಿಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಉಳಿಯ ವಿಷ್ಣು ಆಶ್ರರವರ ನೇತೃತ್ವದಲ್ಲಿ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿತು. ಕ್ಷೇತ್ರದ ಆಡಳಿತ ಮಂಡಳಿ ಪ್ರಮುಖರಾದ ಕೆ.ಎನ್ ವೆಂಕಟ್ರಮಣ ಹೊಳ್ಳ, ಕೆ.ಎನ್ ರಾಮಕೃಷ್ಣ ಹೊಳ್ಳ, ಕೆ.ವಿ ಶ್ರೀನಿವಾಸ ಹೊಳ್ಳ ಸೇರಿದಂತೆ ರಾಯರ ಭಕ್ತರು ಉಪಸ್ಥಿತರಿದ್ದರು.


