Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುರಿಯುತ್ತಿರುವ ಧಾರಾಕಾರ ಮಳೆ. ಹೊಸಂಗಡಿ ಎಂ.ಎಂ. ಪ್ಲಾಜಾದ ವ್ಯಾಪಾರ ಸಂಸ್ಥೆಗಳಿಗೆ ನುಗ್ಗಿದ ಚರಂಡಿ ನೀರು.

ಸುರಿಯುತ್ತಿರುವ ಧಾರಾಕಾರ ಮಳೆ. ಹೊಸಂಗಡಿ ಎಂ.ಎಂ. ಪ್ಲಾಜಾದ ವ್ಯಾಪಾರ ಸಂಸ್ಥೆಗಳಿಗೆ ನುಗ್ಗಿದ ಚರಂಡಿ ನೀರು.
ಮಂಜೇಶ್ವರ: ಹೊಸಂಗಡಿ ಪೇಟೆಯ ಹೃದಯ ಭಾಗದಲ್ಲಿರುವ ಎಂ.ಎಂ. ಪ್ಲಾಜಾದ ನೆಲ ಮಹಡಿಯಲ್ಲಿರುವ ವ್ಯಾಪಾರ ಸಂಸ್ಥೆಗಳಿಗೆ ಮಳೆ ನೀರು ನುಗ್ಗಿದ ಘಟನೆ ಇಂದು ಮುಸ್ಸಂಜೆ ವೇಳೆ ನಡೆದಿದೆ.
ಇದೀಗ ಸುರಿಯುತ್ತಿರುವ ಧಾರಕರ ಮಳೆಯಿಂದಾಗಿ ಹೊಸಂಗಡಿ ಮೇಲಿನ ಪೇಟೆಯಿಂದ ಹರಿದು ಬರುವ ಚರಂಡಿ ನೀರು ತಗ್ಗು ಪ್ರದೇಶದಲ್ಲಿರುವ ಎಂ.ಎಂ. ಪ್ಲಾಜಾದ ಪಕ್ಕವೇ ಹರಿದು, ರಾಷ್ಟ್ರೀಯ ಹೆದ್ದಾರಿ ನಿಗಮದವರು ನೂತನವಾಗಿ ನಿರ್ಮಿಸಿದ ಚರಂಡಿಗೆ ಸೇರುತ್ತಿದೆ. ಈ ಚರಂಡಿಗೆ ಸೇರುವಲ್ಲಿ ಹೆದ್ದಾರಿ ಇಲಾಖೆಯವರು ಗ್ರಿಲ್ ಒಳಗೊಂಡ ಮುಚ್ಚಳ ಅಳವಡಿಸಿದ್ದು, ಇದರಲ್ಲಿ ಹರಿದು ಬರುವ ನೀರಿನಲ್ಲಿರುವ ಪ್ಲಾಸ್ಟಿಕ್, ಕಸ ಕಡ್ಡಿಗಳು ತುಂಬಿ ನೀರು ಸಾಗಲು ಅಸಾಧ್ಯವಾಗಿದೆ.
ಇದರಿಂದ ಕಟ್ಟಿ ನಿಂತ ನೀರು ಪರಿಸರದಲ್ಲಿರುವ ಅಂಗಡಿಗಳಿಗೆ ನುಗ್ಗಿ, ಜಲಾವೃತವಾಗಿದೆ ಎಂದು ಅಂಗಡಿ ಮಾಲಿಕರು ದೂರಿದ್ದಾರೆ. ಕಳೆದ ವರ್ಷ ಇದೇ ರೀತಿ ಘಟನೆ ನಡೆದಿದ್ದು, ವ್ಯಾಪಾರಸ್ಥರು ಮಂಜೇಶ್ವರ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ, ಮಂಜೇಶ್ವರ ಶಾಸಕರಿಗೆ ಕೂಡಾ ಮಾಹಿತಿ ನೀಡಿದ್ದರು. ಆದರೆ ಯಾವುದೇ ಫಲವಿಲ್ಲ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋರ್ಪಡಿಸಿದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.