Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೇಶದ ಸಂಸ್ಕೃತಿಯ ರಾಯಭಾರಿಗಳು - ರವೀಶ ತಂತ್ರಿ ಕುಂಟಾರ್.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೇಶದ ಸಂಸ್ಕೃತಿಯ ರಾಯಭಾರಿಗಳು - ರವೀಶ ತಂತ್ರಿ ಕುಂಟಾರ್.
ಉಪ್ಪಳ: ದೇಶದ ಸಂಸ್ಕೃತಿ ಇಂದು ಜೀವಂತ ವಾಗಿದ್ದರೆ ಅದರ ರಕ್ಷಕರಾಗಿ, ಸಂಸ್ಕೃತಿಯ ರಾಯಭಾರಿಗಳಾಗಿರುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೊಡುಗೆ ಅಪಾರವಾದದ್ದು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಕುಂಟಾರು ರವೀಶ ತಂತ್ರಿ ಹೇಳಿದರು. ಅವರು ಇಂದು ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ಸಮುದಾಯ ಪ್ರಮುಖರ ಸಭೆಯನ್ನು ಉಪ್ಪಳ ಭಗವತೀಯಲ್ಲಿರುವ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಉದ್ಘಾಟಿಸಿ, ಮಾತನಾಡಿದರು.
ಧಾರ್ಮಿಕ ಮುಂದಾಳು ಸದಾನಂದ ಕಡoಬಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಎಸ್ .ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎ .ಕೆ ಕಯ್ಯಾರ್, ಮುಖಂಡರಾದ ಸುಧಾಮ ಗೋಸಾಡ, ಆದರ್ಶ ಬಿ.ಎಂ, ಸುನಿಲ್ ಅನಂತಪುರ, ವಸಂತ್ ಮಯ್ಯ, ಸಮುದಾಯ ಪ್ರಮುಖರು ಉಪಸ್ಥಿತರಿದ್ದರು. ರಮೇಶ್ ಅಟ್ಟೆಗೋಳಿ ಸ್ವಾಗತಿಸಿ, ಪುರುಷೋತ್ತಮ ದೇರಡ್ಕ ಧನ್ಯವಾದ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.