ಬಿ.ಆರ್.ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ
ಫೆಬ್ರವರಿ 02, 2024
0
ಬಿ.ಆರ್.ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮ
ಮಂಜೇಶ್ವರ: ಎಸ್. ಎಸ್. ಕೆ ಕಾಸರಗೋಡು ಇದರ ನೇತೃತ್ವದಲ್ಲಿ ಬಿ.ಆರ್.ಸಿ ಮಂಜೇಶ್ವರ ವತಿಯಿಂದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಪ್ರತಿಭೋತ್ಸವ ಹಾಗೂ ವಿಜಯೋತ್ಸವ ಕಾರ್ಯಕ್ರಮವು ಬಂದ್ಯೋಡು ಪ್ರತಿಭಾ ಕೇಂದ್ರದಲ್ಲಿ ಜರಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಮೀನಾ ಟೀಚರ್ ನೆರವೇರಿಸಿದರು. ಸ್ಥಳೀಯ ವಾರ್ಡ್ ಪ್ರತಿನಿಧಿ ಕಿಶೋರ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಬಿ ಪಿ ಸಿ ವಿಜಯ್ ಕುಮಾರ್ ಪಾವಳ,ಜೋಯ್ ಸರ್, ವಾರ್ಡ್ ಪ್ರತಿನಿಧಿ ಬಾಬು ಬಂದ್ಯೋಡು,ಅಶೋಕ್ ಕೊಡ್ಲಮೊಗರು,ನೆಟ್ಟೋನಿ ಬಂದ್ಯೋಡು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಉಪಜಿಲ್ಲಾ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿವಿಧ ಮೇಳಗಳಲ್ಲಿ ವಿಜೇತರಾದ ಪ್ರತಿಭೆಗಳನ್ನು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು ತಿಲಕ ಟೀಚರ್ ಸ್ವಾಗತಿಸಿ ಸುಮ ಟೀಚರ್ ವಂದಿಸಿದರು ದಿವ್ಯಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ತದನಂತರ ಮಕ್ಕಳಿಗೆ ಹಾಗೂ ರಕ್ಷಕರಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಬಿ ಆರ್ ಸಿ ಟ್ರೈನರಗಳಾದ ಶ್ಯಾಮಲಾ ಟೀಚರ್, ಮೋಹಿನಿ ಟೀಚರ್,ವಿದ್ಯಾ ಟೀಚರ್,ಪ್ರಸನ್ನಾ ಟೀಚರ್,ಪ್ರಕಾಶ್ ಮಾಸ್ಟರ್ ,ಮೊಯಿದಿನ್ ಮಾಸ್ಟರ್ ಕಾರ್ಯಕ್ರಮ ಕ್ಕೆ ನೇತೃತ್ವ ನೀಡಿದರು



