ಮೂಲತಃ ಮಂಗಳೂರು ಶಕ್ತಿನಗರ ನಿವಾಸಿ, ಪ್ರಸ್ತುತ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿರುವ ವಿಶ್ವನಾಥ ಆಚಾರ್ಯ (80) ನಿನ್ನೆ ಮಧ್ಯರಾತ್ರಿ ಹೃದಯಘಾತಗೊಂಡು ನಿಧನ.
ಜನವರಿ 31, 2024
0
ಮೂಲತಃ ಮಂಗಳೂರು ಶಕ್ತಿನಗರ ನಿವಾಸಿ, ಪ್ರಸ್ತುತ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿರುವ ವಿಶ್ವನಾಥ ಆಚಾರ್ಯ (80) ನಿನ್ನೆ ಮಧ್ಯರಾತ್ರಿ ಹೃದಯಘಾತಗೊಂಡು ನಿಧನ.
ಮಂಗಳೂರು: ಮೂಲತಃ ಶಕ್ತಿನಗರ ನಿವಾಸಿಯೂ, ಪ್ರಸ್ತುತ ಇದೀಗ ವಾಮಂಜೂರು ಶ್ರೀ ಅಮೃತೇಶ್ವರ ದೇವಸ್ಥಾನದ ಬಳಿ ವಾಸಿಸುತ್ತಿರುವ ದಿ. ಅಪ್ಪಣ್ಣ ಆಚಾರ್ಯ - ದಿ. ಪಾರ್ವತಿ ದಂಪತಿಯ ಪುತ್ರ ವಿಶ್ವನಾಥ ಆಚಾರ್ಯ (80) ನಿನ್ನೆ ಮಧ್ಯರಾತ್ರಿ ಮನೆಯಲ್ಲಿ ಹೃದಯಘಾತಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು. ಮೃತರು ಪತ್ನಿ ಲೀಲಾವತಿ, ಮಕ್ಕಳಾದ ಗೀತಾಲಕ್ಷ್ಮಿ, ನವೀನ್ ಆಚಾರ್ಯ (ಸೌದಿ ಉದ್ಯೋಗಿ), ಭುವನೇಶ್ವರಿ, ತ್ರಿಶೂಲೇಶ್ ಆಚಾರ್ಯ, ಅಳಿಯಂದಿರಾದ: ಯಜ್ಞೇಶ್ ಆಚಾರ್ಯ ಕೂಡ್ಲು ಕಾಸರಗೋಡು, ಕೆ. ರಾಜಗೋಪಾಲ ಆಚಾರ್ಯ ಕೋಟೆಕಾರ್, ಸೊಸೆಯಂದಿರಾದ ಅಶ್ವಿನಿ, ಚೈತ್ರ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರು ಬಡಗಿ ವೃತ್ತಿ ಮಾಡುತ್ತಿದ್ದರು. ಮೃತದೇಹವು ಇದೀಗ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು, ನಾಳೆ ಬೆಳಿಗ್ಗೆ ಮನೆಗೆ ತರಲಾಗುವುದು. ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.