Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರವಿ ನಾಯ್ಕಾಪು ಆಯ್ಕೆ.

ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಅಧ್ಯಕ್ಷರಾಗಿ ರವಿ ನಾಯ್ಕಾಪು ಆಯ್ಕೆ.
ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ರವಿ ನಾಯ್ಕಾಪು ಆಯ್ಕೆಯಾಗಿದ್ದಾರೆ. ನಗರದ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಕೆ. ಗಂಗಾಧರ್ ಯಾದವ್ ವರದಿ ಮಂಡಿಸಿದರು. ಆಯ ವ್ಯಯ ಪತ್ರವನ್ನು ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ಮಂಡಿಸಿ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಅಖಿಲೇಶ್ ನಗುಮುಂ ಉಪಸ್ಥಿತರಿದ್ದರು. ಪದಾಕಾರಿಗಳು: ಗೌರವಾಧ್ಯಕ್ಷರಾಗಿ ಎ.ಆರ್.ಸುಬ್ಬಯ್ಯಕಟ್ಟೆ, ಅಧ್ಯಕ್ಷರಾಗಿ ರವಿ ನಾಯ್ಕಾಪು,
ಪ್ರಧಾನ ಕಾರ್ಯದರ್ಶಿ ಕೆ.ಗಂಗಾಧರ್ ಯಾದವ್, ಉಪಾಧ್ಯಕ್ಷರಾಗಿ ಪುರುಷೋತ್ತಮ ಪೆರ್ಲ, ಜತೆ ಕಾರ್ಯದರ್ಶಿಗಳಾಗಿ ಸ್ಟಿಫನ್ ಕ್ರಾಸ್ತಾ ಹಾಗೂ ಶ್ಯಾಮ ಪ್ರಸಾದ ಸರಳಿ,
ಕೋಶಾಧಿಕಾರಿಯಾಗಿ ಶ್ರೀಕಾಂತ್ ನೆಟ್ಟಣಿಗೆ ಮತ್ತು ಸದಸ್ಯರಾಗಿ ಪ್ರದೀಪ್ ಕುಮಾರ್ ಬೇಕಲ್, ಅಚ್ಯುತಾ ಚೇವಾರ್, ಥೋಮಸ್ ಡಿ ಸೋಜ, ಝಡ್ ಎ ಕಯಾರ್. ವಿದ್ಯಾಲಕ್ಷ್ಮೀ, ವೇಣುಗೋಪಾಲ ಹಾಗೂ ರಾಜಶೇಖರ್ ಆಯ್ಕೆಯಾದರು. ಸಭೆಯಲ್ಲಿ ವೇಣುಗೋಪಾಲ್, ಅಜಿತ್ ಸ್ವರ್ಗ, ಶ್ರೀಕಾಂತ್ ನೆಟ್ಟಣಿಗೆ, ಪ್ರದೀಪ್ ಬೇಕಲ್, ಅಚ್ಯುತ ಚೇವಾರ್, ಥೋಮಸ್ ಡಿಸೋಜ, ಪ್ರಶಾಂತ್‌ರಾಜ್, ಸ್ಟೀಫನ್ ಕ್ರಾಸ್ತಾ, ದೇವದಾಸ ಪಾರೆಕಟ್ಟಾ, ಪುರುಷೋತ್ತಮ ಕೆಸಿಎನ್, ಶ್ರೀಕಾಂತ್ ಕಾಸರಗೋಡು, ಜಗನ್ನಾಥ ಶೆಟ್ಟಿ ಪಿ.ಕೆ., ಶ್ಯಾಮಪ್ರಸಾದ್ ಸರಳಿ, ಅಶೋಕ ನೀರ್ಚಾಲ್, ಚೇತನ್ ಕುಮಾರ್, ವಿನಯ ಕುಮಾರ್, ಜಯ ಮಣಿಯಂಪಾರೆ, ರಾಜಶೇಖರ್, ಝಡ್ ಎ. ಕಯ್ಯಾರ್, ಗಣೇಶ ಪಿ., ಅಶೋಕ ಕೆ., ದಿನೇಶ್ ಕುಮಾರ್ ಎ.ಬಿ., ರಾಮಚಂದ್ರ ಬಲ್ಲಾಳ್ ಮತ್ತಿತರರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.