ಪೆನ್ಸನ್ ದಾರರನ್ನು ವಂಚಿಸುತ್ತಿರುವ ಕೇರಳ ಸರಕಾರ - ಬಿಜೆಪಿ.
ಜನವರಿ 08, 2024
0
ಪೆನ್ಸನ್ ದಾರರನ್ನು ವಂಚಿಸುತ್ತಿರುವ ಕೇರಳ ಸರಕಾರ - ಬಿಜೆಪಿ.
ಮಂಜೇಶ್ವರ : ಆರ್ಥಿಕ ಮುಗ್ಗಟಿ ನಿಂದ ಕೇರಳದಲ್ಲಿ ಸರಕಾರ ನೀಡಬೇಕಾದ ಕ್ಷೇಮ ಪೆನ್ಸನ್ ಪದ್ಧತಿಗಳು, ಲೈಫ್ ಯೋಜನೆ, ಮನೆ ರಿಪೇರಿ ಯೋಜನೆಗಳು ಬುಡಮೇಲಾಗುತಿದೆ. ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
ಮುಖ್ಯವಾಗಿ ವೃದಪ್ಯ ಪೆನ್ಸನ್
ದಿವ್ಯಾoಗ ಪೆನ್ಸನ್, ವಿಧವಾ ಪೆನ್ಸನ್ ಅಗೋಸ್ಟ್ ತನಕ ಮಾತ್ರ ನೀಡಲಾಗಿದೆ.
ಅದರಲ್ಲೂ ಜುಲೈ ತಿಂಗಳಲ್ಲಿ ಸಿಗದವರಿಗೆ ಅಗೋಸ್ಟ್ ನಲ್ಲೂ ಪೆನ್ಸನ್ ಹಣ ಬಂದಿಲ್ಲ. ಸರಕಾರದ ಉದ್ದೇಶ ಪೂರ್ವಕ ತಂತ್ರ ಎಂದರೆ ಜನತೆಗೆ ಪೆನ್ಸನ್ ಸಿಗದಂತೆ ಮಾಡುವುದು ಬೆಳಕಿಗೆ ಬರುತಿದೆ.
ಪೆನ್ಸನ್ ದಾರರ ಮಾಸ್ಟರಿಂಗ್ ಡಿಸಂಬರ್ ನಲ್ಲಿ ಮಾಡಲು ಆದೇಶ ನೀಡಿ.. ಈಗ ಜುಲೈ ತಿಂಗಳಿನಿಂದ ಹಣ ಸಿಗದವರು ಪ್ರಶ್ನೆಸಿದರೆ ಮಾಸ್ಟರಿಂಗ್ ಆಗಿಲ್ಲ, ಆಧಾರ್ ನೀಡಿಲ್ಲ ಎಂದು ಹೇಳಿ ಪೆನ್ಸನ್ ಫಲನುಭವಿಗಳ ಖಾತೆಗೆ ಹಣ ನೀಡುತ್ತಿಲ್ಲ. ಡಿಸಂಬರ್ ನಲ್ಲಿ ಮಾಸ್ಟರಿಂಗ್, ಆಧಾರ್ ಸಂಗ್ರಹಣೆ ಮಾಡಿ ಜುಲೈ ಬಳಿಕದ ಹಣ ನೀಡದೆ ಸರಕಾರ ವಂಚಿಸುವುದು ಅಕ್ಷಮ್ಯ ಅಪರಾಧ, ಆಗಿದ್ದಾರೆ ಸರಕಾರ ಜುಲೈ ನಲ್ಲೆ ಆಧಾರ್, ಸಂಗ್ರಹ, ಮಾಸ್ಟರಿಂಗ್ ಮಾಡಿ ಜನತೆಗೆ ಹಣ ಸಿಗುವಂತೆ ಮಾಡಬೇಕಿತ್ತು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ
ಆದರ್ಶ ಬಿ ಎಂ ಹೇಳಿದರು. ಇದೆ ರೀತಿ ಮುಂದುವರಿದರೆ ಸರಕಾರ ಇನ್ನು 4ತಿಂಗಳು ಪೆನ್ಸನ್ ಹಣ ತಡೆ ಹಿಡಿಯುವ ಪ್ರಯತ್ನ ಎಂದು ಅವರು ಆರೋಪಿಸಿದರು. ತಮ್ಮ ಜೀವಿತ ಅವಧಿಯಲ್ಲಿ ದುಡಿದ
ಕ್ಷೇಮ ನಿಧಿ, ಬೀಡಿ ಕಾರ್ಮಿಕರ, ಪೆನ್ಸನ್ ಇದ್ದವರಿಗೆ ಸರಕಾರ ಈಗ ವೃಧಪ್ಯ ವೇತನ ಅಲಿಖಿತವಾಗಿ ತಡೆ ಹಿಡಿಯುತಿದೆ, ಮಾತ್ರವಲ್ಲ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು 50ವರ್ಷ ಪೂರ್ತಿ ಆಗಿರಬೇಕೆಂಬ ಅಲಿಖಿತ ಆದೇಶ ಜಾರಿಯಲ್ಲಿದೆ 50ವರ್ಷ ಪೂರ್ತಿ ಆಗದೆ ವಿಧವಾ ಪೆನ್ಸನ್ ಅರ್ಜಿ ಹಾಕಲು ಆಗುತ್ತಿಲ್ಲ ಎಂದು ಬಿಜೆಪಿ ಸರಕಾರದ ಕ್ರಮ ಖಂಡಿಸಿದೆ.
ಲೈಫ್ ಹೆಸರಲ್ಲಿ ಮೊದಲ ಕಂತು ಮಾತ್ರ ನೀಡಲಾಗಿದೆ,ಸರಕಾರದ ನೂತನ ಆದೇಶದ ಪ್ರಕಾರ 1ಲಕ್ಷ ಕಿಂತ ಹೆಚ್ಚಿನ ಹಣ ಟ್ರೇಸರಿ ಆಫೀಸ್ ನಿಂದ ಡ್ರಾ ಮಾಡಲು ಆಗುತ್ತಿಲ್ಲ ಪಿನರಾಯಿ ಸರಕಾರ ಬಡ ಜನತೆಯನ್ನು ವಂಚಿಸುವುದನ್ನು ನಿಲ್ಲಿಸಬೇಕೆಂದು ಬಿಜೆಪಿ ಅಗ್ರಹಿಸಿದೆ.


