ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೊನೆಗಾಣಿಸಲು ಡಿ.ಆರ್ ಕೆ.ಎಸ್. ಆಗ್ರಹ.
ಜನವರಿ 25, 2024
0
ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳು ಕಾರ್ಮಿಕ ವಿರೋಧಿ ನೀತಿಗಳನ್ನು ಕೊನೆಗಾಣಿಸಲು ಡಿ.ಆರ್
ಕೆ.ಎಸ್. ಆಗ್ರಹ.
ಮಂಜೇಶ್ವರ: ಪಾಲಕ್ಕಾಡ್ ರೈಲ್ವೆ ವಿಭಾಗದ ಅಧಿಕಾರಿಗಳು ಅಂಗೀಕೃತ ಮಾಫಿಯಾ ಸಂಘಟನೆಗಳೊಂದಿಗೆ ಸೇರಿಕೊಂಡು ನಡೆಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಕೊನೆಗೊಳಿಸಬೇಕು ಎಂದು ಬಿ.
ಎಂ.ಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಪಿ.ಕೆ.ಬೈಜು ಆಗ್ರಹಿಸಿದರು. ಅವರು ಪಾಲಕ್ಕಾಡ್ ಜಂಕ್ಷನ್ ರೈಲು ನಿಲ್ದಾಣದಿಂದ ವಿಭಾಗೀಯ ಕಚೇರಿಗೆ ನಡೆದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಮಾತನಾಡುತ್ತಾ
ರೈಲ್ವೆ ಅಧಿಕಾರಿಗಳು ನೀತಿ ಪಾಲಿಸಬೇಕು, ಅರ್ಹರ ಬಡ್ತಿಯನ್ನು ಕೂಡಲೇ ನೀಡಬೇಕು, ಖಾಲಿ ಇರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು, ವರ್ಗಾವಣೆಯಲ್ಲಿನ ತಾರತಮ್ಯವನ್ನು ಕೊನೆಗಾಣಿಸಬೇಕು, ಕೆಲಸದ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು ಮತ್ತು ಎಲ್ಲಾ ಕಾರ್ಮಿಕ ಸಂಘಟನೆಗಳೊಂದಿಗೂ ಒಂದೇ ನೀತಿಯನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.
ಸಮಸ್ಯೆ ಬಗೆಹರಿಸದಿದ್ದರೆ ನೌಕರರನ್ನು ಸಂಘಟಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಡಿಆರ್ ಕೆಎಸ್ ವಿಭಾಗೀಯ ಅಧ್ಯಕ್ಷ ಸಿ.ಎಂ. ಶ್ಯಾಮಲನ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಸಿ.ಮಧುಸೂದನನ್, ಕಾರ್ಯದರ್ಶಿ ಕೆ.ಲನೀಶ್, ವಲಯ ಸಹಾಯಕ. ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ವಿಭಾಗೀಯ ಖಜಾಂಚಿ ಆರ್.ಕೆ.ಅಭಿಲಾಷ್ ಮೊದಲಾದವರು ಮಾತನಾಡಿದರು.
ಬಳಿಕ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಲಾಯಿತು.ಪ್ರತಿಭಟನಾ ಮೆರವಣಿಗೆಗೆ ಕೆ.ಅಶೋಕ್ ಕುಮಾರ್, ಕೆ.ಪಿ.ಶಿವದಾಸನ್, ಕೆ.ವಿ.ಉನ್ನಿಕೃಷ್ಣನ್, ವಿಪಿನ್ ದಾಸ್, ಯು.ತುಳಸಿದಾಸ್, ಆರ್.ವಿಷ್ಣು, ವಿನೋದ್.ಕೆ ಕೆ. ಸೋನು ಮುಂತಾದವರು ನೇತೃತ್ವ ವಹಿಸಿದ್ದರು.

