ಉಪಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಕೊಡ್ಲಮೊಗರು U.P ಶಾಲೆಯ ವಿದ್ಯಾರ್ಥಿಗಳು.
ಡಿಸೆಂಬರ್ 07, 2023
0
ಉಪಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಕೊಡ್ಲಮೊಗರು U.P ಶಾಲೆಯ ವಿದ್ಯಾರ್ಥಿಗಳು.
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ನಡೆದ ನಾನಾ ಸ್ಪರ್ಧೆಗಳಲ್ಲಿ ಕೊಡ್ಲಮೊಗರು ಶ್ರೀ ವಾಣಿ ವಿಜಯ ಯು.ಪಿ ಶಾಲೆಯು ಪ್ರಥಮ, ದ್ವಿತೀಯ ಹಾಗೂ ಎ ಗ್ರೇಡ್ ಪ್ರಶಸ್ತಿಗಳನ್ನು ಪಡೆದಿದೆ. L.P ವಿಭಾಗದ ಇಂಗ್ಲಿಷ್ ಪದ್ಯಂಚೋಳ್ಳಲ್ ಸ್ಪರ್ಧೆಯಲ್ಲಿ ಅಬೂಬಕ್ಕರ್ ಸಿದ್ದೀಕ್ ಪ್ರಥಮ ಸ್ಥಾನ ಪಡೆದಿರುತ್ತಾನೆ. ಹಾಗೂ ಯು.ಪಿ ವಿಭಾಗದ ಉರ್ದು ಕವಿತಾ ರಚನೆ ಫಾತಿಮಾತ್ ಸಹೇಲ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಹಾಗೂ ಉರ್ದು ಕ್ವಿಜ್ ಸ್ಪರ್ಧೆಯಲ್ಲಿ ಖದೀಜ ಅಸ್ಫಿಯ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಯು.ಪಿ ವಿಭಾಗದ ಸಂಸ್ಕೃತ ಸಿದ್ದರೂಪೋಚರಣ ಸ್ಪರ್ಧೆಯಲ್ಲಿ ಪ್ರೀತಿಕ ದ್ವಿತೀಯ ಸ್ಥಾನ ಹಾಗೂ ರಿಕಿತ್ ತೃತೀಯ ಸ್ಥಾನ ಪಡೆದಿರುತ್ತಾರೆ . ಹಲವು ವಿದ್ಯಾರ್ಥಿಗಳು ಎ ಗ್ರೇಡ್ ನೊಂದಿಗೆ ವಿಜೇತರಾಗಿರುತ್ತಾರೆ. ಕಲೋತ್ಸವದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಶಾಲಾ ಪ್ರಬಂಧಕರು ಮುಖ್ಯ ಶಿಕ್ಷಕಿ ಹಾಗೂ ಹಾಗೂ ಶಿಕ್ಷಕ ವೃಂದ ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದೆ.

