Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕುಡಿತದ ಚಟದಿಂದ ಮಾನಸಿಕ ನೆಮ್ಮದಿ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೆ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಬೇಕು. - ಶ್ರೀಮತಿ ಅಶ್ವಿನಿ ಎಂ.ಎಲ್.

ಕುಡಿತದ ಚಟದಿಂದ ಮಾನಸಿಕ ನೆಮ್ಮದಿ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೆ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಬೇಕು. - ಶ್ರೀಮತಿ ಅಶ್ವಿನಿ ಎಂ.ಎಲ್.
ಮಂಜೇಶ್ವರ: ಕುಡಿತದ ಚಟದಿಂದ ಮಾನಸಿಕ ನೆಮ್ಮದಿ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಗತಿ ಹಾಳಾಗುತ್ತದೆ. ಹಾಗಾಗಿ ಕುಡಿತ ಸೇರಿದಂತೆ ಯಾವುದೇ ಚಟಕ್ಕೆ ಬಲಿಯಾಗದೆ ಎಲ್ಲರೂ ಉತ್ತಮ ಸಮಾಜ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಬೇಕು ಎಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯೆ ಶ್ರೀಮತಿ ಅಶ್ವಿನಿ ಎಂ.ಎಲ್ ನುಡಿದರು. ಅವರು ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ 1766 ನೇ ಮದ್ಯವರ್ಜನ ಶಿಬಿರದ 4 ನೇ ದಿನವಾದ ಇಂದು ಸಂಜೆ ನಡೆದ "ಗಣ್ಯರ ಮಾಹಿತಿ ಕಾರ್ಯಕ್ರಮ" ದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ, ಮಾತನಾಡಿದರು.
ಕುಡಿತದ ಅಮಲಿನಲ್ಲಿ ಮನೆಯಲ್ಲಿ ಅಸಭ್ಯವಾಗಿ ವರ್ತಿಸುವುದು, ಹೊಡೆಯುವುದು, ಜಗಳ ಮಾಡುವುದು ಮುಂತಾದ ಕಾರಣಗಳಿಂದ ಮನೆ ಜಗಳ ಬೀದಿಗೆ ಬರುವುದಲ್ಲದೆ ಕುಟುಂಬದ ಮಾನ ಮರ್ಯಾದೆ ಸಹ ಹೋಗುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿ ಕೊಲೆ ಮಾಡಿದ ಘಟನೆಗಳು ಸಹ ವರದಿಯಾಗಿದೆ. ಆದ್ದರಿಂದ ಯುವಕರು ಕುಡಿತವನ್ನು ಬಿಟ್ಟು ವಿದ್ಯಾವಂತರಾಗಿ ದೇಶದ ಸತ್ಪ್ರಜೆಗಳಾಗಿ ರೂಪಗೊಳ್ಳಬೇಕು. "ಮದ್ಯ ಸೇವನೆ" ಸಮಾಜದ ದುಷ್ಟಗಳಲ್ಲಿ ಒಂದಾಗಿದೆ ಇದು ಸಮಾಜದ ದೊಡ್ಡ ಪಿಡುಗಾಗಿ ಪರಿಣಮಿಸಿದೆ ಇಂತಹ ಪಿಡುಗನ್ನು ಸಮಾಜದಿಂದ ಹೊರ ಹಾಕುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿರಂತರ ಶ್ರಮಿಸುತ್ತಿರುವುದು ಶ್ಲಾಘನೀಯ ಇದರ ಜೊತೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪ ಮಾಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ॥ ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಸಾರ್ಥಕವಾಗಬೇಕು ಎಂದವರು ಹೇಳಿದರು. ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಹಮೀದ್ ಹೊಸಂಗಡಿ, ಅನಿಲ್ ಕುಮಾರ್ ಮಣಿಯಂಪಾರೆ, ನಿವೃತ್ತ ಮಂಜೇಶ್ವರ ಡೆಪ್ಯೂಟಿ ತಹಸಿಲ್ದಾರ್ ಸೋಮಶೇಖರ್, ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ಮಾಡ, ಜನಜಾಗೃತಿ ವೇದಿಕೆ ಪೆರ್ಲ ವಲಯ ಅಧ್ಯಕ್ಷ ಬಿ.ಪಿ ಶೇಣಿ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮ್ಯಾನೇಜರ್ ನಾರಾಯಣ, ಮಧ್ಯವರ್ಜನ ಶಿಬಿರ ಸಮಿತಿಯ ಗೌರವಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು. ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಕುಂಬಳೆ ವಲಯ ಮೇಲ್ವಿಚಾರಕ ರಮೇಶ್ ಕಾರ್ಯಕ್ರಮ ನಿರೂಪಿಸಿ, ಕಾಸರಗೋಡು ಜಿಲ್ಲಾ ನವ ಜೀವನ ಸಮಿತಿ ಸದಸ್ಯ ಯೋಗೀಶ್ ಆಚಾರ್ಯ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ
ಜ್ಞಾನವಿಕಾಸ ಕೇಂದ್ರಗಳು, ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಕುಂಬಳೆ ವಲಯದ ವತಿಯಿಂದ ವಿವಿಧ ವಿನೋದಾವಳಿಗಳು, ಶ್ರೀ ಮಹಾದೇವ ಭಜನಾ ಮಂಡಳಿ ಕಳತ್ತೂರು, ಮಡ್ವ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ಬೆಳಗ್ಗೆ
ಶ್ರೀ ಮಹಾದೇವ ನವ ಜೀವನ ಸಮಿತಿ ಕಳತ್ತೂರು ಮಡ್ವ ಹಾಗೂ ಸೌಪರ್ಣಿಕಾ ನವ ಜೀವನ ಸಮಿತಿ ಬದಿಯಡ್ಕ ಇದರ ಸದಸ್ಯರಿಂದ ಅನಿಸಿಕೆ ಅಭಿಪ್ರಾಯಗಳು ವ್ಯಕ್ತಪಡಿಸಿದರು.
ಮಂಜೇಶ್ವರ ಆರಕ್ಷಕ ಠಾಣೆಯ ಶ್ರೀ ಮಧು, ಶಿಬಿರಾರ್ಥಿಗಳಿಗೆ ಸಲಹೆಗಳನ್ನ ನೀಡಿದರು.
ಶ್ರೀ ಸಾಯಿನಿಕೇತನ ಸೇವಾಶ್ರಮ ದೈಗೋಳಿಯ ಡಾ. ಶಾರದಾ ಉದಯಕುಮಾರ್ ಮಾತೆಯರಿಗೆ ಕೌಟುಂಬಿಕ ಸಲಹೆ ನೀಡಿದರು.
ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಎನ್ ಕಡಂಬಾರು ಶಿಬಿರಾರ್ಥಗಳಿಗೆ ಗುಂಪು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ಕೆ. ಪಾವೂರು ಆಗಮಿಸಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಶಿಬಿರಾಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಫೋಟೋ: ದೀಪಕ್ ರಾಜ್ ಉಪ್ಪಳ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.