ಯಾವುದೇ ಶೀರ್ಷಿಕೆಯಿಲ್ಲ
ಡಿಸೆಂಬರ್ 08, 2023
0
ರಾಷ್ಟೀಯ ಸಾಂಸ್ಕೃತಿಕ ಯಾತ್ರೆ ಮಂಜೇಶ್ವರದಲ್ಲಿ ಸಮಾರೋಪ.
ಮಂಜೇಶ್ವರ: ರಾಷ್ಟ್ರೀಯ ಸಾಂಸ್ಕೃತಿಕ ಯಾತ್ರೆಯ ಸಮಾರೋಪ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಗಳ ನಿವಾಸ ಗಿಳಿವಿಂಡುವಿನಲ್ಲಿ ನಡೆಯಿತು. ರಂಗಕರ್ಮಿ ಪ್ರಸನ್ನ ಹೆಗ್ಗೋಡು ನೇತೃತ್ವದಲ್ಲಿ ಗಿಳಿವಿಂಡುವಿನಲ್ಲಿ ರಂಗ ತರಬೇತಿ ಶಿಬಿರ ನಡೆಯಿತು. ಕರ್ನಾಟಕ, ಕೇರಳ ಸೇರಿದಂತೆ 9 ರಾಜ್ಯಗಳ 40 ಮಂದಿ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದರು. ಪ್ರೀತಿ ಸಹಬಾಳ್ವೆ ಯಾತ್ರೆ ಹೆಸರಿನಲ್ಲಿ ಡಿ: 1 ರಿಂದ ಬೆಂಗಳೂರಿನಿಂದ ಸಾಂಸ್ಕೃತಿಕ ಯಾತ್ರೆ ಆರಂಭಗೊಂಡಿತು. ಇಂದು ಬೆಳಿಗ್ಗೆ ಮಂಜೇಶ್ವರ ತಲುಪಿದ ಯಾತ್ರೆಯು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರ ಹಾಗೂ ಉದ್ಯಾವರ ಸಾವಿರ ಜಮಾಹತ್ ಮಸೀದಿಗೆ ತೆರಳಿ ವಿವಿಧೆಡೆ ತೆರಳಿ ಕೊನೆಗೆ ಗಿಳಿವಿಂಡುವಿಗೆ ಆಗಮಿಸುವುದರೊಂದಿಗೆ ಸಂಪನ್ನಗೊಂಡಿತು. ಸಮಾರೋಪ ಕಾರ್ಯಕ್ರಮವನ್ನು ಷಣ್ಮುಖಾನಂದ ಉದ್ಘಾಟಿಸಿದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ ಅಧ್ಯಕ್ಷತೆ ವಹಿಸಿದರು. ಪ್ರಸನ್ನ ಹೆಗ್ಗೋಡು, ಉದ್ಯಾವರ ಮಾಡ ದೈವದ ಪಾತ್ರಿ ತಿಮಿರಿ ಬೆಳ್ಚಪ್ಪಾಡರು, ಉದ್ಯಾವರ ಸಾವಿರ ಜಮಾಹತ್ ಅಧ್ಯಕ್ಷ ಸೈಫುಲ್ಲ ತಂಗಳ್, ಮಂಜೇಶ್ವರ, ಮೀಂಜ ಗ್ರಾಮ ಪಂಚಾಯತ್ ಅಧ್ಯಕ್ಷೆಯರಾದ ಜೀನ್ ಲವೀನಾ ಮಂತೆರೋ, ಸುಂದರಿ ಆರ್ ಶೆಟ್ಟಿ ಮೊದಲಾದವರು ಭಾಷಣ ಮಾಡಿದರು.
ಸಮುದಾಯ ಅಧ್ಯಕ್ಷ ಗುಂಡಣ್ಣ ವಿಶ್ರಾಂತ, ಕುಲಪತಿ ಸಬಿಹಾ ಭೂಮಿ ಗೌಡ, ಬಿ.ವಿ ರಾಜನ್, ಶಿವಸ್ವಾಮಿ, ಸುರೇಶ್, ಗಣೇಶ್ ಶೆಟ್ಟಿ ಕುಂದಾಪುರ, ಫಿರೋಝ್, ಸಾವಿತ್ರಿ, ಶ್ರೀಧರ್ ಮಾಡ, ದಯಾಕರ ಮಾಡ ಮೊದಲಾದವರು ಉಪಸ್ಥಿತರಿದ್ದರು. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಸಾಲ್ಯಾನ್ ಸ್ವಾಗತಿಸಿ, ವಂದಿಸಿದರು.








