ಸೋಮೇಶ್ವರ ಕಡಲಲ್ಲಿ ನೀರುಪಾಲಾದ ಮಂಜೇಶ್ವರ ಬಳಿಯ ಕುಂಜತ್ತೂರು ನಿವಾಸಿಗಳಾದ ಶೇಖರ ಎಂಬವರ ಪುತ್ರ ಯಶ್ವಿತ್ (17) ಹಾಗೂ ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ರ ಪುತ್ರ ಯುವರಾಜ್ (17) ಮೃತದೇಹ ಪತ್ತೆ. ಕುಂಜತ್ತೂರು ಪರಿಸರ ಶೋಕ ಸಾಗರ.
ಡಿಸೆಂಬರ್ 10, 2023
0
ಮಂಜೇಶ್ವರ: ಸೋಮೇಶ್ವರ ಕಡಲಲ್ಲಿ ನೀರು ಪಾಲಾದ ಕುಂಜತ್ತೂರು ನಿವಾಸಿಗಳಿಬ್ಬರ ಮೃತ ದೇಹ ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಪತ್ತೆಯಾಗಿದೆ. ಮಂಜೇಶ್ವರ ಬಳಿಯ ಕುಂಜತ್ತೂರು ಅಡ್ಕ ನಿವಾಸಿ ಶೇಖರ -ಮೀನಾಕ್ಷಿ ದಂಪತಿಗಳ ಪುತ್ರ ಯಶ್ವಿತ್ (17) ಹಾಗೂ ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ - ಚಿತ್ರ ದಂಪತಿ ಪುತ್ರ ಯುವರಾಜ್ (17) ಎಂಬಿಬ್ಬರ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿದೆ. ಮೃತಪಟ್ಟ ಯಕ್ಷಿತ್ ಕುಂಜತ್ತೂರು ಅಡ್ಕ ಶ್ರೀ ನಾಗಮೂಲ ಭಜನಾ ಮಂಡಳಿಯ ಸದಸ್ಯನಾಗಿದ್ದಾನೆ. ಮೃತನು ತಂದೆ, ತಾಯಿ ಹಾಗೂ ಏಕ ಸಹೋದರಿ ಗೌತಮಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾನೆ. ಮೃತಪಟ್ಟ ಇನ್ನೋರ್ವ ಯುವರಾಜ್ ತಂದೆ, ತಾಯಿ ಏಕ ಸಹೋದರಿ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾನೆ. ಇವರಿಬ್ಬರೂ ಸೋಮೇಶ್ವರದ ಪರಿಜ್ನಾನ ಪಿ.ಯು ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿದ್ದು, ತಮ್ಮ 4 ಮಂದಿ ಸ್ನೇಹಿತರ ಜೊತೆಗೂಡಿ ಒಟ್ಟು 6 ಮಂದಿ ನಿನ್ನೆ ಅಪರಾಹ್ನ ಕೋಟೆಕಾರು ಬಳಿಯ ಸೋಮೇಶ್ವರ ಸೋಮನಾಥ ದೇವಸ್ಥಾನಕ್ಕೆ ಆಗಮಿಸಿ, ಮಧ್ಯಾಹ್ನದ ಅನ್ನ ಪ್ರಸಾದ ಸ್ವೀಕರಿಸಿ, ಸಮುದ್ರದಲ್ಲಿ ಸ್ನಾನಕಿಳಿದಿದ್ದರು. ಇವರಿಬ್ಬರ ಸಾವು ಕುಂಜತ್ತೂರು ಪರಿಸರದಲ್ಲಿ ಶೋಕ ಸಾಗರ ಸೃಷ್ಟಿಸಿದೆ.


