ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಕಥಕ್ಕಳಿ ಸಂಗೀತದಲ್ಲಿ ಕುಮಾರಿ ಅಪರ್ಣ. ಪಿ, ಮಂಜೇಶ್ವರ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಡಿಸೆಂಬರ್ 10, 2023
0
ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಕಥಕ್ಕಳಿ ಸಂಗೀತದಲ್ಲಿ ಕುಮಾರಿ ಅಪರ್ಣ. ಪಿ, ಮಂಜೇಶ್ವರ ಪ್ರಥಮ ಸ್ಥಾನಿಯಾಗಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಮಂಜೇಶ್ವರ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದಲ್ಲಿ ಕಥಕ್ಕಳಿ ಸಂಗೀತದಲ್ಲಿ ಕುಮಾರಿ ಅಪರ್ಣ. ಪಿ, ಎಸ್.ಎ. ಟಿ ಶಾಲೆ ಮಂಜೇಶ್ವರ 10 ನೇ ತರಗತಿಯ ವಿದ್ಯಾರ್ಥಿನಿ ಪ್ರಥಮ ಸ್ಥಾನಿಯಾಗಿ ಕೇರಳ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಮಲಯಾಳ ಪದ್ಯವನ್ನು ಕಲಿತು ಅಭ್ಯಸಿಸಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದು ಅಭಿನಂದನಾರ್ಹ. ಇವಳು ಮಂಜೇಶ್ವರ ಎಸ್. ಎ. ಟಿ ಶಾಲಾ ಬಳಿಯ ನಿವಾಸಿಯೂ, ಶಾಲೆಯ ಅಧ್ಯಾಪಕ ದಂಪತಿಗಳಾದ ಪೂರ್ಣಯ್ಯ ಪುರಾಣಿಕ ಹಾಗೂ ಬೀನಾ ಇವರ ಪುತ್ರಿಯಾಗಿರುತ್ತಾಳೆ.