ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ಸಭೆ.
ಡಿಸೆಂಬರ್ 03, 2023
0
ಮಂಜೇಶ್ವರ ಮಂಡಲ ಕಾಂಗ್ರೆಸ್ ಸಮಿತಿ ಸಭೆ.
ಮಂಜೇಶ್ವರ: ಇಂಡಿಯನ್ ನೇಶನಲ್ ಕಾಂಗ್ರೆಸ್ ಮಂಜೇಶ್ವರ ಮಂಡಲ ಸಮಿತಿಯ ಸಭೆ ಹೊಸಂಗಡಿ ಗೇಟ್ ವೇ ಆಡಿಟೋರಿಯಂನಲ್ಲಿ ಜರುಗಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ಅಹ್ಮದ್ ಮನ್ಸೂರ್ ಬಿ.ಎಂ.ಅಧ್ಯಕ್ಷತೆ ವಹಿಸಿದ್ದರು. ಕೆ.ಪಿ.ಸಿ.ಸಿ ನೇತೃತ್ವದ ದಿ. ಕರುಣಾಕರನ್ ಫೌಂಡೇಶನ್ ಕಟ್ಟಡ ನಿಧಿಯನ್ನು ಯಶಸ್ವಿಗೊಳಿಸಲು ತೀರ್ಮಾನಿಸಲಾಯಿತು. ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವುದು, ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳಾದ ಓಂಕೃಷ್ಣ, ಹಮೀದ್ ಹೊಸಂಗಡಿ, ರಂಜಿತ್ ಮಂಜೇಶ್ವರ, ಸೇವಾದಳ ಜಿಲ್ಲಾ ಕಾರ್ಯದರ್ಶಿ ಇರ್ಷಾದ್ ಮಂಜೇಶ್ವರ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಶಾಂತಿ.ಕೆ, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಮುಸ್ತಫಾ, ಸಿದ್ದೀಕ್ ಮಂದ್ರಿ, ಅಫ್ಸರ್, ಫಾರೂಕ್, ಉಸ್ಮಾನ್, ಸಿರಾಜ್, ಮುಂತಾದವರು ಉಪಸ್ಥಿತರಿದ್ದರು. ನೂತನ ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷರಾಗಿ ಚುನಾಯಿತಗೊಂಡ ಮುಸ್ತಫಾರವರನ್ನು ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಶಾಲು ಹೊದೆಸಿ ಅಭಿನಂದಿಸಲಾಯಿತು.

