ಮಂಜೇಶ್ವರಕ್ಕೆ ಕೇಂದ್ರೀಯ ವಿದ್ಯಾಲಯ ನೀಡಬೇಕು: ಸಂಸದ ರಾಜ್ ಮೋಹನ್ ಉನ್ನಿತ್ತಾನ್ ಸದನದಲ್ಲಿ ಪ್ರಶ್ನೆ.!
ಡಿಸೆಂಬರ್ 05, 2023
0
ಮಂಜೇಶ್ವರಕ್ಕೆ ಕೇಂದ್ರೀಯ ವಿದ್ಯಾಲಯ ನೀಡಬೇಕು: ಸಂಸದ ರಾಜ್ ಮೋಹನ್ ಉನ್ನಿತ್ತಾನ್.
ಕಾಸರಗೋಡು: ಮಂಜೇಶ್ವರದಲ್ಲಿ ಕೇಂದ್ರೀಯ ವಿದ್ಯಾಲಯಕ್ಕೆ ಅನುಮತಿ ನೀಡಬೇಕೆಂದು ಸಂಸತ್ತಿನಲ್ಲಿ ರಾಜಮೋಹನ್ ಉನ್ನಿತ್ತಾನ್ ಆಗ್ರಹಿಸಿದ್ದಾರೆ. ಮಂಜೇಶ್ವರದಲ್ಲಿ ಉನ್ನತ ಗುಣಮಟ್ಟವಿರುವ ಒಂದೇ ಒಂದು ಶಿಕ್ಷಣ ಸಂಸ್ಥೆ ಇಲ್ಲ. ಇಲ್ಲಿನ ಕೇಂದ್ರ ರಾಜ್ಯ ಸಂಸ್ಥೆಗಳಲ್ಳಿರುವ ಅಧಿಕಾರಿಗಳಲ್ಲಿ ಶೇ.90 ರಷ್ಟು ಇತರೆ ಜಿಲ್ಲೆಗಳಿಂದ ಬಂದವರು. ಉನ್ನತ ಗುಣಮಟ್ಟವ ಶಿಕ್ಷಣ ಸಂಸ್ಥೆ ಇಲ್ಲದ ಕಾರಣ ತಮ್ಮ ಮಕ್ಕಳ ಶೈಕ್ಷಣಿಕ ಭವಿಷ್ಯ ಲೆಕ್ಕಿಸಿ ವರ್ಗಾವಣೆ ತೆಗೆದು ಹೋಗುತ್ತಾರೆ. ಈ ಕಾರಣದಿಂದ ಮಂಜೇಶ್ವರ ತಾಲೂಕಿನ ಅಭಿವೃದ್ಧಿ ಕಾರ್ಯಕ್ಕೆ ದಕ್ಕೆಯುಂಟಾಗುತ್ತದೆ. ಮಂಜೇಶ್ವರದಲ್ಲಿ ಕೇಂದ್ರೀಯ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಕನಿಷ್ಠ ತಾತ್ಕಾಲಿಕ ವ್ಯವಸ್ಥೆಯಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತದೆಯೇ..? ಎಂಬ ಪ್ರಶ್ನೆಯನ್ನು ರಾಜ್ ಮೋಹನ್ ಉನ್ನಿತ್ತಾನ್ ರವರು ಸದನದಲ್ಲಿ ಎತ್ತಿದರು. ಇಲ್ಲಿ ಸರ್ಕಾರಿ ಭೂಮಿ ಲಭ್ಯವಿದೆ ಮತ್ತು ಪಂಚಾಯತ್ ಸಂಸ್ಥೆಗಳ ಸಹಕಾರದೊಂದಿಗೆ ಭೂಮಿ ಸ್ವಾಧೀನಪಡಿಸಿಕೊಂಡು ಲಭ್ಯವಾಗುವಂತೆ ಮಾಡಿದರೆ, ಇಲ್ಲಿ ಕೇಂದ್ರೀಯ ಶಾಲೆ ಮಂಜೂರು ಮಾಡಲು ಕ್ರಮಕೈಗೊಳ್ಳಬಹುದಾ..? ಎಂದು ಸಂಸದರು ಕೇಳಿದರು. ಆದರೆ ದುರದೃಷ್ಟವಶಾತ್ ಕೇರಳ ರಾಜ್ಯ ಸರ್ಕಾರದಿಂದ ಕೇಂದ್ರ ಸರಕಾರಕ್ಕೆ ಇದು ಸಂಬಂದಪಟ್ಟು ಇಲ್ಲಿಯವರೆಗೆ ಯಾವುದೇ ಅರ್ಜಿಗಳು ನೀಡಿಲ್ಲ. ಕೇರಳ ರಾಜ್ಯದ 38 ಕೇಂದ್ರೀಯ ವಿದ್ಯಾಲಯ ಸೇರಿ ದೇಶಾದ್ಯಂತ 1252 ಕೇಂದ್ರಿಯ ವಿದ್ಯಾಲಯ ಕಾರ್ಯಾಚರಿಸುತ್ತಿದೆ. ಹೊಸ ವಿದ್ಯಾಲಯ ತೆರೆಯುವುದು ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಹೆಚ್ಚಿಸುವ ಸಲುವಾಗಿದೆಯೆಂದು ಹೊಸ ಕೇಂದ್ರೀಯ ಶಾಲೆಗಳನ್ನು ನಿಯಮಾವಳಿಗಳಿಗೆ ಅನುಗುಣವಾಗಿ ಸ್ಥಾಪಿಸಲು ಯಾವುದೇ ಅಡ್ಡಿಯಿಲ್ಲ. ಅಗತ್ಯ ಸ್ಥಳಾವಕಾಶ ಮತ್ತು ತಾತ್ಕಾಲಿಕ ವಸತಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಖಾತ್ರಿಪಡಿಸಿಕೊಂಡು, ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ ಹೊಸ ಶಾಲೆಯನ್ನು ತೆರೆಯಲು ಕ್ರಮಕೈಗೊಳ್ಳಬಹುದು ಎಂದು ಸಂಸದರ ನಕ್ಷತ್ರ ಚಿಹ್ನೆಯ ಪ್ರಶ್ನೆಗೆ ಉತ್ತರಿಸಿ, ಕೇಂದ್ರ ಶಿಕ್ಷಣ ಸಚಿವ ಶ್ರೀ ಧರ್ಮೇಂದ್ರ ಪ್ರಧಾನ ಅವರು ಉತ್ತರ ನೀಡಿರುವುದಾಗಿ ಸಂಸದರು ಮಾಹಿತಿ ನೀಡಿದರು.


