Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸಂಬಂಧಿಕರ ವಿವಾಹ ಕಾರ್ಯದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿರುವ ವೇಳೆ ಗಲ್ಫ್ ಉದ್ಯೋಗಿ ವರ್ಕಾಡಿ ನಲ್ಲೆಂಗಿ ನಿವಾಸಿ ಸಾಜಿದ್ (38) ಹೃದಯಾಘಾತದಿಂದ ನಿಧನ.

ಸಂಬಂಧಿಕರ ವಿವಾಹ ಕಾರ್ಯದಲ್ಲಿ ಪಾಲ್ಗೊಳ್ಳಲು ತಯಾರಿ ನಡೆಸುತ್ತಿರುವ ವೇಳೆ ಗಲ್ಫ್ ಉದ್ಯೋಗಿ ವರ್ಕಾಡಿ ನಲ್ಲೆಂಗಿ ನಿವಾಸಿ ಸಾಜಿದ್ (38) ಹೃದಯಾಘಾತದಿಂದ ನಿಧನ.
ಮಂಜೇಶ್ವರ: ವರ್ಕಾಡಿ ನಲ್ಲೆಂಗಿಪದವು ನಿವಾಸಿ ಗಲ್ಫ್ ನಲ್ಲಿ ಉದ್ಯೋಗಿಯಾಗಿರುವ ಸಾಜಿದ್ (38) ನಿನ್ನೆ ಬೆಳಗ್ಗೆ ಹೃದಯಾಘಾತಗೊಂಡು ನಿಧನರಾದರು. ರೆಹಮಾನ್ ಸಾಹಿಬ್ - ನೂರ್ ಬಾನ್ ದಂಪತಿಗಳ ಪುತ್ರನಾಗಿರುವ ಸಾಜಿದ್ ಗಲ್ಫ್ ನಲ್ಲಿ ಉದ್ಯೋಗಿಯಾಗಿದ್ದು, ಸಂಬಂಧಿಕರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಕೆಲ ವಾರಗಳ ಹಿಂದೆ ಊರಿಗೆ ಆಗಮಿಸಿದ್ದರು. ಇಂದು ಮುಂಬೈಯಲ್ಲಿ ನಡೆಯುವ ಮದುವೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದು, ಮದುವೆ ಸಮಾರಂಭ ಮುಗಿಸಿ ಮುಂಬೈಯಿಂದಲೇ ಗಲ್ಫ್ ತೆರಳಲು ನಿರ್ಧರಿಸಿದ್ದರು. ನಿನ್ನೆ ಬೆಳಗ್ಗೆ ತಾಯಿ ಜೊತೆ ಮಜೀರ್ಪಲ್ಲ ಪೇಟೆಗೆ ತನ್ನ ಕಾರಿನಲ್ಲಿ ಬಂದು ಸಾಮಗ್ರಿ ಪಡೆದು ಬ್ಯಾಂಕ್ ಗೆಂದು ತೆರಳಿದ್ದರು. ಈ ವೇಳೆ ತಲೆ ನೋವೆಂದು ತಾಯಿಯಲ್ಲಿ ತಿಳಿಸಿ ಕಾರಿನಲ್ಲಿ ಬಂದು ಕುಳಿತ ಸಾಜಿದ್ ಗೆ ಹೃದಯಾಘಾತವುಂಟಾಗಿ, ಸಾವು ಸಂಭವಿಸಿದೆ. ಮೃತರು ತಂದೆ - ತಾಯಿ, ಪತ್ನಿ: ಸಫ್ರಿನ ಬಾನು, ಎರಡು ಹೆಣ್ಣು, ಒಂದು ಗಂಡು ಮಕ್ಕಳನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.