Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಕೇಂದ್ರ ಸರಕಾರದ ಯೋಜನೆ ಗಳ ಬುಡಮೇಲು ರಾಜ್ಯ ಪಿನರಾಯಿ ಸರಕಾರದ ಕುಲ ಕಸುಬು - ನ್ಯಾ. ಶ್ರೀಕಾಂತ್.

ಕೇಂದ್ರ ಸರಕಾರದ ಯೋಜನೆ ಗಳ ಬುಡಮೇಲು ರಾಜ್ಯ ಪಿನರಾಯಿ ಸರಕಾರದ ಕುಲ ಕಸುಬು - ನ್ಯಾ. ಶ್ರೀಕಾಂತ್.
ಪೈವಳಿಕೆ: ಕೇಂದ್ರ ಸರಕಾರ ಜಾರಿ ಮಾಡುವ ಎಲ್ಲಾ ಜನಪರ ಯೋಜನೆಗಳನ್ನು ಬುಡಮೇಲು ಗೊಳಿಸುವುದು, ಹೆಸರು ಬದಲಾಯಿಸಿ ಯೋಜನೆ ಜನತೆಗೆ ಸಿಗದಂತೆ ಮಾಡುವುದು ರಾಜ್ಯ ಪಿನರಾಯಿ ಸರಕಾರದ ಕುಲ ಕಸುಬು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾ. ಶ್ರೀ ಕಾಂತ್ ಹೇಳಿದರು. ಬಿಜೆಪಿ ಪೈವಳಿಕೆ ನಾರ್ತ್ ಸಮಿತಿ ಹಮ್ಮಿಕೊಂಡ ಜನ ಪಂಚಾಯತ್ ಸಾರ್ವಜನಿಕ ಸಭೆ ಉದ್ಘಾಟಿಸಿ ಬಾಯರ್ ಪದವಿನಲ್ಲಿ ಮಾತನಾಡಿದರು. ಖಜಾನೆ ಲೂಟಿ ಒಡೆದಿರುವ ರಾಜ್ಯ ಸರಕಾರ ರಾಜ್ಯದಲ್ಲಿ ಸಂಬಳ, ಪೆನ್ಸನ್, ಯಾವುದು ನೀಡುತ್ತಿಲ್ಲ ಎಂದು ಆರೋಪಿಸಿದರು. ಕೀರ್ತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಮಂಡಲಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುಖಂಡರಾದ ಎ.ಕೆ. ಕೈಯ್ಯಾರ್, ಮಣಿಕಂಠ ರೈ, ಅಶ್ವಿನಿ ಎಂ.ಎಲ್, ಹರಿಶ್ಚಂದ್ರ ಎಂ, ಸದಾಶಿವ ಚೇರಾಲ್, ಪ್ರವೀಣ್ ಚಂದ್ರ ಬಲ್ಲಾಳ್, ಚಂದ್ರವತಿ, ಜಯಲಕ್ಷ್ಮೀ ಭಟ್, ಪುಷ್ಪ ಉಪಸ್ಥಿತರಿದ್ದರು. ಗೋಪಾಲ್ ಸಪಲ್ಯ ಸ್ವಾಗತಿಸಿ, ಸತ್ಯಶಂಕರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.