Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಜೈನ ಮುನಿಗಳ ಮೇಲೆ ಎಸಗಿದ ಪೈಶಾಚಿಕ ದುಷ್ಕೃತ್ಯಕ್ಕೆ ಘೋರ ಶಿಕ್ಷೆಯಾಗಲಿ. - ವೀರಪ್ಪ ಅಂಬಾರ್.

ಜೈನ ಮುನಿಗಳ ಮೇಲೆ ಎಸಗಿದ ಪೈಶಾಚಿಕ ದುಷ್ಕೃತ್ಯಕ್ಕೆ ಘೋರ ಶಿಕ್ಷೆಯಾಗಲಿ.

ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಕಾಸರಗೋಡು ಜಿಲ್ಲಾ ಸಮಿತಿ ಮತ್ತು ಜೈನ್ ವೆಲ್ಫೇರ್ ಸಮಿತಿ ಬಂಗ್ರಮಂಜೇಶ್ವರ ಇದರ ಆಶ್ರಯದಲ್ಲಿ ನಿನ್ನೆ ಸಂಜೆ ಮಂಜೇಶ್ವರ ಜೈನ ಬಸದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ , ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕುನಲ್ಲಿ ನಡೆದ ಜೈನ ಮುನಿಗಳ ಹತ್ಯೆಯನ್ನು ಖಂಡಿಸಿ ನಡೆದ ಮೌನ ಪ್ರತಿಭಟನೆಯನ್ನು ಉದ್ದೇಶಿಸಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರರೂ ಮಂಜೇಶ್ವರ ತಾಲೂಕು ಸಾಮರಸ್ಯ ಪ್ರಮುಖ್ ಆಗಿರುವ ಶ್ರೀ ವೀರಪ್ಪ ಅಂಬಾರ್ ರವರು ಜೈನ ಮುನಿಗಳ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ ಮಾತನಾಡಿದರು. ಜೈನ ಕ್ಷೇತ್ರದಲ್ಲಿ ಹತ್ಯೆಗೊಳಗಾದ ಜೈನ ಮುನಿಗಳ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು.


ಬಳಿಕ ಎಲ್ಲರೂ ಹತ್ತು ನಿಮಿಷಗಳ ಕಾಲ ಮೌನವಾಗಿ ಕುಳಿತು ತಮ್ಮ ಪ್ರತಿಭಟನೆಯನ್ನು ಸೂಚಿಸಿದರು. ಜೈನ್ ವೆಲ್ಫೇರ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ ಜೈನ್, ಬಸದಿಯ ಮೊಕ್ತೇಸರರಾದ ಶ್ರೀ ಯಶೋಧರ ಜೈನ್ ಅಡ್ವೋಕೇಟ್ ಸುದರ್ಶನ್ ಜೈನ್, ದಿನೇಶ್ ಜೈನ್ ಉಪಸ್ಥಿತರಿದ್ದರು.

ವಿ.ಹಿಂ.ಪ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಶ್ರೀ ಶಂಕರ ಭಟ್ ಉಳುವಾನ, ಕೋಶಾಧಿಕಾರಿ ಎ. ಟಿ ನಾಯ್ಕ್, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸೌಮ್ಯ ಪ್ರಕಾಶ್, ಆನಂದ್ ಬಾಯಾರು, ಪ್ರೀತಿ ನಿಶಾನ್ ರೈ ,ಸಂಜೀವ ಶೆಟ್ಟಿ ಮಾಡ , ಸತ್ಯ ವೀರನಗರ , ಭಾಜಪ ಪದಾಧಿಕಾರಿಗಳಾದ ಅಶ್ವಿನಿ ಪಜ್ವ, ಹರಿಶ್ಚಂದ್ರ ಮಂಜೇಶ್ವರ, ಯಾದವ ಪರಂಕಿಲಬಡಾಜೆ, ಆದರ್ಶ್ ಬಿ ಎಂ, ವಸಂತಕುಮಾರ್ ಮಯ್ಯ, ಸುನಿಲ್ ಅನಂತಪುರ, ಲೋಕೇಶ್ ನೋಂಡ, ಜೋಡುಕಲ್ಲು, ಸದಾಶಿವ ಚೇರಾಲು, ಭರತ್ ರೈ ಕೋಡಿಬೈಲು, ಕಿಶೋರ್ ಭಗವತಿ, ಚಂದ್ರಕಾಂತ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಪರಿವಾರ ಸಂಘಟನೆಯ ಮೋಹನ್ ದಾಸ್ ಐಲ, ದಿನಕರ ಹೊಸಂಗಡಿ, ದೇವರಾಜ್, ಹೈಮೇಶ್ ಬಿ.ಎಂ, ಮಂಜೇಶ್ವರ, ಶಶಿಧರ್ ನಾಯ್ಕ್ ವರ್ಕಾಡಿ, ನಿಶಾರೇಖಾ ಐಲ, ರೋಹಿಣಿ ಐಲ, ಕಮಲ ಟೀಚರ್ ಬಾಯಾರು ಮತ್ತು ತಾಯಂದಿರು, ಸಹೋದರರು ಉಪಸ್ಥಿತರಿದ್ದರು.

ವಿಶ್ವ ಹಿಂದೂ ಪರಿಷತ್ ಮಾತೃ ಶಕ್ತಿ ಕಣ್ಣೂರು ವಿಭಾಗ ಪ್ರಮುಖ್ ಶ್ರೀಮತಿ ಮೀರಾ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ವಿ.ಹಿo.ಪ ಜಿಲ್ಲಾ ಸೇವಾ ಪ್ರಮುಖ್ ಶ್ರೀ ಸುರೇಶ್ ಶೆಟ್ಟಿ  ವಂದಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು
.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.