ಮಂಗಳೂರು: ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಹಾಗೂ ಒಡಿಯೂರು ಶ್ರೀವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮಂಗಳೂರು ವಲಯ ದ ಪದಗ್ರಹಣ ಕಾರ್ಯಕ್ರಮ ಮಂಗಳೂರು ಕೊಡಿಯಾಲುಬೈಲ್ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಇಂದು ಬೆಳಗ್ಗೆ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು. ಬಳಿಕ ಎಲ್ಲರೂ ಅವರವರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದರೆ ಸಮಾಜ ಪರಿವರ್ತನೆಯಾಗಲು ಸಾಧ್ಯ, ಇಲ್ಲಿ ಎಲ್ಲರೂ ಸೇವಕರು, ಸೇವೆಯೇ ವಿಶಿಷ್ಟವಾಗಿದೆ, ದೀನದಲಿತರ ಸೇವೆ ಭಗವಂತನ ಸೇವೆಯಾಗಿದೆ, ಆದ್ದರಿಂದ ಮನುಷ್ಯರ ಸೇವೆ ಮಾಡಿದರೆ ಭಗವಂತನ ಪ್ರೀತಿಗೆ ಪಾತ್ರವಾಗುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಒಡಿಯೂರು ಸ್ವಾಮೀಜಿ ಔಷದೀಯ ಸಸಿಗಳನ್ಮು ವಿತರಿಸಿದರು. ಮಂಗಳೂರು ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಮಾತನಾಡಿ ಮಣ್ಣನ್ನು ಮುಟ್ಟದ ಎಷ್ಟೋ ಮಕ್ಕಳು ನಗರದಲ್ಲಿ ಇದ್ದಾರೆ, ನಮ್ಮ ಪರಿಸರವನ್ನು ಅಭಿವೃದ್ಧಿಯ ಹೆಸರಲ್ಲಿ ಹಾಳುಮಾಡುತ್ತಿದ್ದಾರೆ, ಇದ್ದ ಪರಿಸರವನ್ನು ನಾವು ಉಳಿಸಬೇಕು, ಈ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಪರಿಸರ ಕಾಳಜಿಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ ಎಂದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಪರಮಪೂಜ್ಯ ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀ, ಮಂಗಳೂರು ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಅಬೀಶ್ ಬಿಲ್ಡರ್ಸ್ ಮಾಲಕ ಪುಷ್ಪರಾಜ್ ಜೈನ್, ಅರಕೆಬೈಲುಅಂಬಾಮಹೇಶ್ವರಿ ಭಜನಾ ಮಂದಿರದ ಅಧ್ಯಕ್ಷ ಎ.ಸೀತಾರಾಮ, ಚಿಲಿಂಬಿ ಸಾಯಿಮಂದಿರ ಶ್ರೀ ಸಾಯಿಶಕ್ತಿ ಕಲಾಬಳಗದ ಸಂಚಾಲಕಿ ಶ್ರೀಮತಿ ಲಾವಣ್ಯ ವಿಶ್ವಾಸ್ ದಾಸ್, ಸರ್ವಾಣಿ ಬಿ.ಶೆಟ್ಟಿ, ಅಸೋಕ್ ಕುಮಾರ್ ಬಿಜೈ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಸ್ಥಾಪಕಾಧ್ಯಕ್ಷ ಸಿ.ಎ ರಾಮಮೋಹನ ರೈ, ಅಧ್ಯಕ್ಷರು ಜಯಂತ .ಜೆ.ಕೋಟ್ಯಾನ್, ಕಾರ್ಯದರ್ಶಿ ದಿನಕರ ಶೆಟ್ಟಿ, ಕೋಶಾಧಿಕಾರಿ ಜನಾರ್ದನ ರೈ ಮೊದಲಾದವರು ಉಪಸ್ಥಿತರಿದ್ದರು.
ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮಂಗಳೂರು ವಲಯದ ನೂತನ ಅಧ್ಯಕ್ಷರಾಗಿ ಜಿತೇಂದ್ರ ಕೊಟ್ಟಾರಿ, ಕಾರ್ಯಾಧ್ಯಕ್ಷ ರಾರನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿಎ.ಕೃಷ್ಣ ಶೆಟ್ಟಿ ತಾರೆಮಾರ್ ಹಾಗೂ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ, ಮಂಗಳೂರು ವಲಯದ ಅಧ್ಯಕ್ಷರಾಗಿ ನಿವೇದಿತಾ ಎನ್.ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರವಿಪ್ರಭಾ ಶೆಟ್ಟಿ, ಕೋಶಾಧಿಕಾರಿ ಬಬಿತಾ ಶೆಟ್ಟಿ ಮತ್ತು ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ನೂತನ ಪದಾಧಿಕಾರಿಗಳಿಗೆ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶಾಲು ಹಾಕಿ ಗೌರವಿಸಿದರು.
ನಿಕಟಪೂರ್ವ ಅಧ್ಯಕ್ಷ ಜಯಂತ್ ಕೋಟ್ಯಾನ್ ಸ್ವಾಗತಿಸಿದರು, ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಗ್ರಾಮ ವಿಕಾಸ ಯೋಜನೆ ಸದಸ್ಯರು ಪ್ರಾರ್ಥಿಸಿದರು, ಪ್ರಧಾನ ಕಾರ್ಯದರ್ಶಿ ಎ. ಕೃಷ್ಣ ಶೆಟ್ಟಿ ತಾರೆಮಾರ್ ವಂದಿಸಿದರು.


