ಹಿಂದಿ ಭಾಷೆ ಭಾರತದ ಏಕತೆಯ ಬೆನ್ನೆಲುಬು - ಎಂ.ಎಲ್.ಅಶ್ವಿನಿ.
ನೀಲೇಶ್ವರಂ: ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ಜನರನ್ನು ಸಂಪರ್ಕಿಸುವ ಭಾಷೆಯ ಸೇತುವೆ ಹಿಂದಿ ಭಾಷೆ ಎಂದು ಮಂಜೇಶ್ವರಂ ಬ್ಲಾಕ್ ಪಂಚಾಯತ್ ಸದಸ್ಯೆ ಎಂ.ಎಲ್ ಅಶ್ವಿನಿ ಹೇಳಿದರು.
ನೀಲೇಶ್ವರಂ ಹಿಂದಿ ಬಿಎಡ್ ಕಾಲೇಜಿನ ವಾರ್ಷಿಕ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋಗಬೇಕಾದರೆ ಭಾಷಿಕವಾಗಿ ಸಂವಹಿಸಬೇಕು, ಹಿಂದಿ ಭಾಷೆಯ ಅರಿವಿರಬೇಕು, ಭಾರತದಲ್ಲಿ ಹಿಂದಿ ಗೊತ್ತಿಲ್ಲದ ಪ್ರದೇಶಗಳು ಕಡಿಮೆ, ಹೊರ ದೇಶಗಳಲ್ಲಿಯೂ ಸಹ ಹಿಂದಿ ಮಾತನಾಡುತ್ತಾರೆ. ಹಿಂದಿ ಭಾಷೆ ಬೆಳೆಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಅದಕ್ಕಾಗಿಯೇ ಮಹಾತ್ಮ ಗಾಂಧಿಯವರು ಹಿಂದಿ ಪ್ರಚಾರ ಸಭೆಯನ್ನು ರಚಿಸಿದರು ಎಂದು ಅವರು ಹೇಳಿದರು. ಸಭೆಯ ಅಧ್ಯಕ್ಷತೆಯನ್ನು ಡಾ.ಕೆ. ಪ್ರಭಾಕರನ್ ವಯಸಿದ್ದರು. ಕಣ್ಣೂರು ವಿ.ವಿ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲಕರು ಸ್ವಾಗತಿಸಿ, ಅಧ್ಯಾಪಕ ತ್ಯಾಂಪನ್ ವಂದಿಸಿದರು.

