Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳವರ ಪುಣ್ಯ ದರ್ಶನ.

 ಓಂ ಶ್ರೀ ಗುರು ರಾಘವೇಂದ್ರಾಯ ನಮ: 


(ಇಂದಿನ (06 - 07 - 23) ಬೆಳಗ್ಗಿನ ಅಲಂಕಾರದಲ್ಲಿ ಪೂಜ್ಯ ಗುರು ರಾಘವೇಂದ್ರ ಸ್ವಾಮಿಗಳವರ ಮೂಲ ವೃಂದಾವನ.)

ಶ್ರೀಕಾರ ಶ್ರೀ ಪದ್ಮಯುಗ್ಮ ಹಸ್ತಂ ೧ ಶ್ರೀ ರಾಘವೇಂದ್ರಾನುಗ್ರಹ ಪ್ರಾಪ್ತಂ

ಲೋಕ ಕಲ್ಯಾಣಾರ್ಥಂ ಮಂತ್ರಾಲಯ ವಾಸಂ ೧ ಶ್ರೀ ರಾಘವೇಂದ್ರ ಗುರೂಜಿಂ ಮನಸಾ ಸ್ಮರಾಮಿ”

ಗುರು ರಾಯನೆಂದರೆ ಸಾಕು, ಕಷ್ಟಗಳು ದೂರ ಸರಿಯುವವು, ಆಡಂಭರವನ್ನು ಬಯಸದ ಗುರುಗಳಿಗೆ ಭಕ್ತಿ ಪೂರ್ವಕವಾಗಿ ನಮನ ಸಲ್ಲಿಸಿ, ಮನದಲ್ಲೇ ದುಃಖವನ್ನು ದೂರ ಮಾಡೆಂದು ಬೇಡಿಕೊಂಡು, ಪ್ರದಕ್ಷಿಣೆ ಬಂದರೆ ಸಾಕು ಸಕಲ ಅಭೀಷ್ಟಗಳನ್ನು ನೆರವೇರಿಸುವರು. 

"ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರವೇಶ"


ಶಾಲಿವಹನ ಶಕೆ ೧೫೯೩ ಕ್ರಿ.ಶ. ೧೬೭೧ ಶ್ರಾವಣ ಬಹುಳ ದ್ವಿತೀಯ ಗುರುವಾರದಂದು ಶ್ರೀ ರಾಘವೇಂದ್ರ ಸ್ವಾಮಿಗಳು ‘ಯೋಗೀಂದ್ರರಿಗೆ’ ಮಠಾಧಿಕಾರವನ್ನು ವಹಿಸಿಕೊಟ್ಟರು. ಬೃಂದಾವನದ ಅಷ್ಟ ದಿಕ್ಕುಗಳಲ್ಲಿಯೂ ಆಯಾ ದೇವತಾ ಮೂರ್ತಿಗಳನ್ನು ಸ್ಥಾಪಿಸಿದರು. ಬೃಂದಾವನದ ಎದುರಿಗೆ ‘ಮುಖ್ಯ ಪ್ರಾಣ ದೇವರನ್ನು ಮತ್ತು ಶಿವಲಿಂಗ’ವನ್ನು ನೋಡಬಹುದು.


ಶ್ರೀರಾಮ ದೇವರನ್ನು ಬಹಳ ವೈಭವದಿಂದ ಪೂಜಿಸಿ ಎಲ್ಲರಿಗೂ ತೀರ್ಥ ಪ್ರಸಾದವನ್ನು ಶ್ರೀ ಗುರುಗಳು ಕೊಡುತ್ತಾರೆ. ರಾಯರಿಗೆ ದೇವಿಯು ತಿಳಿಸಿದಂತೆ ‘ಮೇಷ ಮಸ್ತಕದ ಲಾಂಛನವನ್ನು ಮಹಾದ್ವಾರದ’ ಬಾಗಿಲಲ್ಲಿ ಪ್ರತಿಷ್ಟಾಪಿಸುತ್ತಾರೆ. ಗುರುಗಳು ಎಲ್ಲರಿಗೂ ಹಿತೋಪದೇಶಗಳನ್ನು ಹೇಳುತ್ತಾರೆ. ಅಪಾರವಾಗಿ ನೆರೆದಿದ್ದವರೆಲ್ಲರೂ ಸ್ವಾಮಿಯನ್ನು ಅಗಲಿರಲಾರದೆ ದುಃಖ ತಪ್ತರಾಗುತ್ತಾರೆ. ಆಗ ರಾಘವೇಂದ್ರ ಸ್ವಾಮಿಗಳು ಲೋಕ ಕಲ್ಯಾಣವನ್ನೇ ಚಿಂತಿಸುತ್ತಿರುವ ನಮಗೆ ನಿಮ್ಮೆಲ್ಲರ ಕಲ್ಯಾಣದ ಚಿಂತನೇ ಇಲ್ಲವೇ ? ದುಃಖಿಸ ಬೇಡಿ, ಎಲ್ಲರೂ ಸಮಾಧಾನವಾಗಿರಿ ಎಂದು ಹೇಳುತ್ತಾರೆ. ಸಕಲವಾದ್ಯಗಳು ಮೊಳಗುತ್ತವೆ. ಯೋಗೀಂದ್ರರು ಹಸ್ತಲಾಘವನ್ನು ಮಾಡುತ್ತಾರೆ ಎನ್ನಲಾಗುತ್ತದೆ. ತಮ್ಮನ್ನು ನಂಬಿ ಸೇವಿಸಿದಂತೆ ಯೋಗೀಂದ್ರರನ್ನು ಸೇವಿಸಿ ಕೃತಾರ್ಥರಾಗಿರೆಂದು ಮತ್ತೊಮ್ಮೆ ಎಲ್ಲರಿಗೂ ಹೇಳಿ ಬೃಂದಾವನದ ಪ್ರವೇಶಾನಂತರ ಮಾಡ ಬೇಕಾದ ವಿಧಿಗಳನ್ನು ತಿಳಿಸಿ ಶಿಲಾವರಣದಲ್ಲಿ ಕೂರ್ಮಾಸನದಲ್ಲಿ ಪೂರ್ವಾಭಿಮುಖವಾಗಿ ಮುಖ್ಯ ಪ್ರಾಣನನ್ನು ನೋಡುತ್ತ ಚಿನ್ಮುದ್ರಾಧಾರಿಗಳಾಗಿ, ಯೋಗಾ ರೂಢಿಗಳಾಗಿ ಕುಳಿತು ಕೊಳ್ಳುತ್ತಾರೆ. 


ಪೂರ್ವ ಸಂಕೇತದಂತೆ ಕೈಯಲ್ಲಿರುವ ಜಪ ಮಾಲೆ ಸರಿಯುವುದು ನಿಲ್ಲತ್ತದೆ. ಯೋಗೀಂದ್ರರೊಂದಿಗೆ ಭಕ್ತರು ಮುಚ್ಚುಗಲ್ಲು ಇಟ್ಟು ಸುಮಾರು ‘ಏಳನೂರು ಸಾಲಿಗ್ರಾಮಗಳನ್ನು ಇರಿಸಿ ಅದರ ಮೇಲೆ ಸಂಪುಟ ಶಿಲೆಯನ್ನು ಹಾಕಿ ಮೃತ್ತಿಕೆಯನ್ನು ಹರಡುತ್ತಾರೆ.’ ನಂತರ ವೃಂದಾವನದ ಮೇಲೆ ‘ಶ್ರೀ ನರಸಿಂಹ ಸ್ವಾಮಿ ಮೂರ್ತಿ’ ಇಟ್ಟು, ಅಭಿಷೇಕ ಪೂಜಾದಿಗಳನ್ನು ಬಹಳ ವೈಭವದಿಂದ ಮಾಡುತ್ತಾರೆ. ಈ ಪ್ರಕಾರವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳು ಬೃಂದಾವನಸ್ಥರಾದರು ಎಂದು ಹೇಳಲಾಗುತ್ತದೆ. ಸಶರೀರ ಬೃಂದಾವನ ಪ್ರವೇಶ ಮಾಡಿದ ರಾಘವೇಂದ್ರ ಸ್ವಾಮಿಗಳ ಮಹಿಮೆ ವರ್ಣಿಸಲಸಾಧ್ಯ. ಭಕ್ತಿಯ ಮಾರ್ಗವೊಂದೇ ಸನ್ನಿಧಾನಕ್ಕೆ ದಾರಿ ದೀಪ. ಬೃಂದಾವನದ ಪ್ರೇಶ ಮಾಡಿದ ದಿನದಿಂದಲೇ ರಾಯರ ಪವಾಡಗಳು, ಮಹಿಮೆಗಳು ಪ್ರಕಟವಾಗಿ, ಅಪಾರವಾಗುತ್ತಲಿತ್ತು. ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾ ಬೇಡಿದ್ದನ್ನು ನೀಡುವ ಕಾಮಧೇನುವಾಗಿ ಮಂತ್ರಾಲಯದಲ್ಲಿ ನೆಲೆಸಿ, ಭಕ್ತ ಜನರ ಹೃದಯ ಮಂದಿರದಲ್ಲಿ ಆರಾಧ್ಯ ದೈವವಾದರು.


ಗುರು ರಾಯರ ದೇಗುಲದ ಪಕ್ಕದಲ್ಲಿಯೇ ಕ್ಷೇತ್ರ ಮಾತೆ ‘ಶ್ರೀ ಮಂಚಾಲಮ್ಮನ’ ದೇವಸ್ಥಾನವೂ ಇದೆ. 

ದೇಗುಲದ ಹಿಂಭಾಗದಲ್ಲಿರುವ ತುಂಗಾಭದ್ರಾ ನದಿಯು ರಾಯರ ಧ್ಯಾನ ಮಾಡುತ್ತಾ ಹರಿಯುತ್ತಿರುತ್ತದೆ.


ಬೃಂದಾವನ – 


ಗುರುರಾಯರ ದರ್ಶನ ಪಡೆಯುತ್ತಿದ್ದಂತೆ, ಭಕ್ತಿ ಭಾವಗಳು ಉಂಟಾಗಿ, ರಾಯರನ್ನೇ ನೋಡುತ್ತಾ ನಿಲ್ಲುವಂತಾಗುತ್ತದೆ. ನಮ್ಮೊಂದಿಗೆ ಗುರುಗಳು ಮಾತನಾಡುತ್ತಾ ಹರಸುತ್ತಿರುವಂತಿರುವ ರಾಯರ ಮಹಿಮೆ ಅಪಾರ.


ಪರಿಮಳ ಪ್ರಸಾದ –


ಮಂತ್ರಾಲಯ ಎಂದರೆ ತಕ್ಷಣ ನೆನಪಿಗೆ ಬರುವುದು ಪ್ರಸಾದ. ಕೆಸರಿ ಬಣ್ಣದ ಪ್ರಸಾದ ಸೇವಿಸಿದರೆ ಸಕಲ ಬಾಧೆಗಳು ನಿವಾರಣೆಯಾಗಿ, ಮನಸ್ಸಿಗೆ ನೆಮ್ಮದಿಯುಂಟಾಗುತ್ತದೆ.

ಮಂತ್ರಾಕ್ಷತೆ –


ಮಂತ್ರಾಕ್ಷತೆಯಲ್ಲಿದೆ ಅಷ್ಟ ಕಷ್ಟಗಳ ನಿವಾರಣೆ. ದುಷ್ಟ ಶಕ್ತಿಗಳ ದೂರ ಮಾಡುವ ಅಸ್ತç. ರಾಯರ ಆಶೀರ್ವಾದ ಸದಾ ಭಕ್ತರ ಜೊತೆಯಲ್ಲಿಯೇ ಮಂತ್ರಾಕ್ಷತೆಯ ರೂಪದಲ್ಲಿ ಇರುತ್ತದೆ.

ಮೃತ್ತಿಕಾ – 


ರಾಯರ ಮಂತ್ರಾಕ್ಷತೆಯಷ್ಟೇ ಪವಿತ್ರವಾದ ಮಹಿಮೆಯುಳ್ಳ ಮೃತ್ತಿಕೆಯನ್ನು ಮಠದ ಹಿಂಭಾಗದಲ್ಲಿ ತುಳಸೀ ಮೃತ್ತಿಕಾ ಬೃಂದಾವನದಲ್ಲಿ ಕೊಡುತ್ತಾರೆ. ತುಳಸೀ ವೃಂದಾವನಕ್ಕೆ ವಿಶೇಷವಾದ ಶಕ್ತಿ ಇದೆ. ಗುಣವಾಗದೆಂದು ಕೈಚೆಲ್ಲಿದ್ದ ಅನೇಕ ರೋಗಗಳಿಗೆ ಮೃತ್ತಿಕೆಯ ಪವಾಡದಿಂದ ರೋಗ ರುಜಿನಗಳು ನಿವಾರಣೆಯಾಗಿ. ರಾಯರ ಅನುಗ್ರಹದಿಂದ ನೆಮ್ಮದಿ ದೊರೆಯುತ್ತದೆ. ಮೃತ್ತಿಕೆಯು ಸಂಜೀವಿನಿಯoತಿದೆ.


ಶ್ರೀ ಗುರು ರಾಯರ ಸನ್ನಿಧಾನ ಮಂತ್ರಾಲಯ ಕ್ಷೇತ್ರವು, ವಿಶಿಷ್ಟವಾದ ಪುಣ್ಯ ಕ್ಷೇತ್ರ. ದೇಹಿ ಎಂದು ಬಂದವರಿಗೆ ಅವರವರ ಕೋರಿಕೆಗಳಂತೆ ವರಗಳನ್ನು ನೀಡಿ ಹರುಷವನ್ನು ತರುವ ದೇವನ ಕೃಪಾಕಟಾಕ್ಷವು ಸಕಲ ಜೀವರಾಶಿಗಳಲ್ಲೂ ಕಾಣಬಹುದಾಗಿದೆ.

ಡಾ. ಆರ್. ಶೈಲಜ ಶರ್ಮಾ, ಕತ್ತರಿಗುಪ್ಪೆ, ಬೆಂಗಳೂರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.