ಬಂದಡ್ಕ: ಬಂದಡ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 75ನೇ ವಾರ್ಷಿಕೋತ್ಸವವನ್ನು ಒಂದು ವರ್ಷ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ಶಾಲಾ ಆಡಳಿತ ಮಂಡಳಿ ತೀರ್ಮಾನಿಸಿದೆ. ಇದರ ಅಂಗವಾಗಿ 2026 ಮಾರ್ಚ್ 31ರಂದು 74ನೇ ಶಾಲಾ ವಾರ್ಷಿಕೋತ್ಸವ ಹಾಗೂ 75ನೇ ವರ್ಷದ ವಾರ್ಷಿಕೋತ್ಸವದ ಉದ್ಘಾಟನೆ ನಡೆಯಲಿದೆ.
ಕಾರ್ಯಕ್ರಮದ ನಿಮಿತ್ತ ಶಾಲೆಯ ಇತಿಹಾಸವನ್ನು ಪ್ರತಿಬಿಂಬಿಸುವುದರ ಜೊತೆಗೆ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವಂತಾಗಿಯೂ ಶಾಲೆಯ ಗೌರವವನ್ನು ಎತ್ತಿ ತೋರಿಸುವಂತಾಗಿಯೂ ಲೋಗೋ ವಿನ್ಯಾಸಕ್ಕೆ ಸಾರ್ವಜನಿಕರಿಂದ ಆಹ್ವಾನ ನೀಡಲಾಗಿದೆ.
ಲೋಗೋ ವಿನ್ಯಾಸವು 15x15 ಸೆಂ.ಮೀ ಗಿಂತ ಕಡಿಮೆ ಇರಬಾರದು. ಆಸಕ್ತರು ತಮ್ಮ ಲೋಗೋ ವಿನ್ಯಾಸವನ್ನು 2026 ಮಾರ್ಚ್ 24ರೊಳಗೆ ಕಳುಹಿಸಬೇಕು. ಆಯ್ಕೆಯಾಗುವ ಉತ್ತಮ ಲೋಗೋಗೆ ಬಹುಮಾನ ನೀಡಲಾಗುತ್ತದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.
ಲೋಗೋ ಕಳುಹಿಸುವವರು ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ವಿವರಗಳನ್ನು ಸೇರಿಸಬೇಕು. ನಿಗದಿತ ದಿನಾಂಕದ ನಂತರ ಬಂದ ಲೋಗೋಗಳನ್ನು ಸ್ವೀಕರಿಸಲಾಗುವುದಿಲ್ಲ.
ಲೋಗೋ ಕಳುಹಿಸುವ ವಿಳಾಸ:
Email: ghssbandadka75@gmail.com
ಹೆಚ್ಚಿನ ಮಾಹಿತಿಗೆ:
8606159636
8547334400
9447735401
